logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಸಂಶೋಧನಾ ಕ್ಷೇತ್ರಗಳು

ಬಾಳೆಹಣ್ಣು ಬಾರ್(bar)  

ಬಾಳೆಹಣ್ಣು ದೇಶದ ಅತಿದೊಡ್ಡ ಉತ್ಪಾದನೆಯ ಹಣ್ಣುಗಳಲ್ಲಿ ಒಂದಾಗಿದೆ ಮತ್ತು ಮುಖ್ಯವಾಗಿ ಇದನ್ನು ತಾಜಾವಾಗಿ ಸೇವಿಸುತ್ತೇವೆ. ಇದು ಕಾರ್ಬೋಹೈಡ್ರೇಟ್‌ (carbohydrate), ಕ್ಯಾರೊಟಿನಾಯ್ಡ್‌ (carotenoid), ಕರಗಬಲ್ಲ ಮತ್ತು ಕರಗದ ಆಹಾರದ ಫೈಬರ್‌ (fibre) ಗಳನ್ನು ಒಳಗೊಂಡಿದೆ. ಬಾಳೆಹಣ್ಣಿನ ಬಾರ್ (bar) ಅನ್ನು ತಯಾರಿಸಲು, ಮಾಗಿದ ಬಾಳೆಹಣ್ಣಿನಿಂದ ತೆಗೆದ ಬಾಳೆಹಣ್ಣಿನ ತಿರುಳನ್ನು ಬಳಸಬಹುದು. ಬಾಳೆಹಣ್ಣಿನ ಅಧಿಕ ಉತ್ಪಾದನೆಯು ಬೆಲೆಯಲ್ಲಿನ ಇಳಿಕೆ ಮತ್ತು ಇದರ ವ್ಯಾಪಾರದಲ್ಲಿ ಕುಸಿತವನ್ನು ಉಂಟುಮಾಡುತ್ತದೆ. ಆದ್ದರಿಂದ ಬಾಳೆಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಬಹಳ ಇದೆ. ಉತ್ತಮ ರಚನೆ, ಬಣ್ಣ ಮತ್ತು ಒಟ್ಟಾರೆ ಗುಣಮಟ್ಟದೊಂದಿಗೆ ಬಾಳೆಹಣ್ಣಿನ ಬಾರ್ (bar) ಹೆಚ್ಚು ಸ್ವೀಕಾರಾರ್ಹವಾಗಿದೆ. ಈ ಬಾರ್ (bar) ಅನ್ನು ಮಿಠಾಯಿ ಉತ್ಪನ್ನವಾಗಿ ಸೇವಿಸಬಹುದು ಮತ್ತು ವಿಶೇಷ ಪಡಿತರ ಯೋಜನೆಗಳಾದ ಮಧ್ಯಾಹ್ನದ ಬಿಸಿಯೂಟ ಹಾಗೂ ರಕ್ಷಣಾಪಡೆಗಳಿಗಾಗಿ ಕೂಡ ಆಹಾರ ಶಕ್ತಿಯ ಮೂಲವಾಗಿ ಬಳಸಬಹುದು. ಇದು ಮಕ್ಕಳು, ವಯಸ್ಕರು, ಹದಿಹರೆಯದವರು ಮತ್ತು ವಯಸ್ಸಾದ ಜನರು ಸೇವಿಸಲು ಸೂಕ್ತವಾಗಿದೆ. ಈ ಉತ್ಪನ್ನದ ಶೆಲ್ಫ್ (shelf) ಲೈಫ್ (life) ಸುಮಾರು 6 ತಿಂಗಳುಗಳು. ಬಾಳೆಹಣ್ಣು ಬಾರ್ (bar) ಶಕ್ತಿ ಮತ್ತು ಸೂಕ್ಷ್ಮ ಪೋಷಕಾಂಶಗಳ ಉತ್ತಮ ಮೂಲವಾಗಿದೆ.


ನೈಸರ್ಗಿಕ ಸಂರಕ್ಷಕಗಳೊಂದಿಗೆ ಶೆಲ್ಫ್ (shelf) ಸ್ಟೇಬಲ್ (Stable) ಮಫಿನ್ಸ್ (Muffins) ಮತ್ತು ಬ್ರೆಡ್ (bread) 

ಸಿಎಫ್‌ಟಿಆರ್‌ಐ "ಶೆಲ್ಫ್ ಸ್ಟೇಬಲ್ ಮಫಿನ್ಸ್ (Shelf stable muffins) ಮತ್ತು ಬ್ರೆಡ್ (bread)" ತಂತ್ರಜ್ಞಾನಗಳನ್ನು ವಾಣಿಜ್ಯೀಕರಿಸಿದೆ. ಇದು ಸೂಕ್ಷ್ಮಜೀವಿ ವಿರೋಧಿ ಮತ್ತು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ನೈಸರ್ಗಿಕ ಪದಾರ್ಥಗಳನ್ನು ಸಂರಕ್ಷಕಗಳಾಗಿ ಹೊಂದಿದೆ. ಈ ತಂತ್ರಜ್ಞಾನವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ 2 ಉತ್ತಮ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಕಪ್‌ಕೇಕ್‌ (cupcake)ಗಳು ಎಂದು ಕರೆಯಲ್ಪಡುವ ಮಫಿನ್‌ (muffin) ಗಳು ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಶೆಲ್ಫ್ (shelf) ಲೈಫ್ (life) ಅನ್ನು ಹೊಂದಿರುತ್ತವೆ. ಮಫಿನ್‌(muffin)ಗಳನ್ನು ಯಾವುದೇ ಸಂರಕ್ಷಕಗಳಿಲ್ಲದೆ 8-10 ದಿನಗಳವರೆಗೆ ಇಡಬಹುದು. ಬ್ರೆಡ್(bread) 2-3 ದಿನಗಳ ಶೆಲ್ಫ್ (shelf) ಲೈಫ್ (life) ಅನ್ನು ಹೊಂದಿದೆ. ಸಂರಕ್ಷಕಗಳಾದ ಆಂಟಿಮೈಕ್ರೊಬಿಯಲ್ (antimicrobial), ಆಂಟಿಆಕ್ಸಿಡೆಂಟ್‌(antioxidant), ಚಿಲೇಟಿಂಗ್ ಏಜೆಂಟ್‌ (chelating agent) ಮತ್ತು ಕ್ಯಾಲ್ಸಿಯಂ ಪ್ರೊಪಿಯೊನೇಟ್ (calcium propionate) / ಸೋರ್ಬಿಕ್ (sorbic) ಆಮ್ಲಗಳನ್ನು, ಮಫಿನ್ (muffin) ಮತ್ತು ಬ್ರೆಡ್(bread) ಗಳನ್ನು ಹೆಚ್ಚು ಕಾಲ ಉಳಿಸಲು ಮತ್ತು ಅವುಗಳ ಬಣ್ಣ, ರುಚಿ ಮತ್ತು ಪೋಷಕಾಂಶಗಳನ್ನು ಹಾಗೇಯೇ ಉಳಿಸಿಕೊಳ್ಳಲು ಬಳಸಲಾಗುತ್ತದೆ. ವಿಷಕಾರಿಯಲ್ಲದ ಸ್ವಭಾವ ಮತ್ತು ಪ್ರತಿಕೂಲ ಅಡ್ಡಪರಿಣಾಮಗಳ ಗುಣವಿಲ್ಲದಿರುವುದರಿಂದ, ನೈಸರ್ಗಿಕ ಸಂರಕ್ಷಕಗಳ ಬಳಕೆಯು ಇತ್ತೀಚಿನ ವರ್ಷಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.
ಶೆಲ್ಫ್ (shelf) ಸ್ಟೇಬಲ್ (Stable) ಮಫಿನ್ಸ್ (Muffins) ಮತ್ತು ಬ್ರೆಡ್ (bread) ನ ನೈಸರ್ಗಿಕ ಸಂರಕ್ಷಕಗಳು ಈ ಉತ್ಪನ್ನಗಳು ಬೇಗ ಕೆಡುವುದನ್ನು ತಡೆಯುತ್ತವೆ. ಹೀಗೆ ತಯಾರಿಸಿದ ಬ್ರೆಡ್ (bread) ಉತ್ತಮ ಪರಿಮಾಣ, ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಬೂಸ್ಟ್ (boost) ನಿಂದ ಮುಕ್ತವಾಗಿರುತ್ತದೆ. ಆದ್ದರಿಂದ, ನೈಸರ್ಗಿಕ ಪದಾರ್ಥಗಳನ್ನು ಸಂರಕ್ಷಕಗಳಾಗಿ ಬಳಸುವುದರಿಂದ ಮಫಿನ್‌ (muffin) ಗಳು 3 ವಾರ ಮತ್ತು ಬ್ರೆಡ್ (bread), 5 ದಿನಗಳ ಕಾಲ ಬೂಸ್ಟ್ (boost) ಬರದೆ, ಸೂಕ್ಷ್ಮಜೀವಿಗಳಿಂದ ಕೆಡದೆ, ಉತ್ತಮವಾಗಿರುತ್ತವೆ.


ಗ್ಲುಟನ್(Gluten) ಮುಕ್ತ ಬೇಕರಿ ಉತ್ಪನ್ನಗಳು

ಗ್ಲುಟನ್(Gluten), ಗೋಧಿಯ ಶೇಖರಣಾ ಪ್ರೋಟೀನ್ (protein) ಆಗಿದೆ, ಇದು ವಿಸ್ಕೊ(visco)-ಸ್ಥಿತಿಸ್ಥಾಪಕತ್ವ ಪ್ರಕೃತಿಯನ್ನು ಹೊಂದಿದ್ದು ಬೇಕರಿ, ಸಾಂಪ್ರದಾಯಿಕ ಮತ್ತು ಪಾಸ್ಟಾ (pasta) ಉತ್ಪನ್ನಗಳಿಗೆ ಆಕಾರವನ್ನು ನೀಡುತ್ತದೆ. ಸೆಲಿಯಾಕ್ ಡಿಸೀಸ್ (celiac disease) (ಸಿಡಿ-CD), ಸೆಲಿಯಾಕ್ (celiac) ಅಲ್ಲದ ಗ್ಲುಟನ್ (Gluten) ಸಂವೇದನೆ (ಎನ್‌ಸಿಜಿಎಸ್), ಗ್ಲುಟನ್ ಅಟಾಕ್ಸಿಯಾ (gluten ataxia), ಡರ್ಮಟೈಟಿಸ್ ಹರ್ಪಿಟಿಫಾರ್ಮಿಸ್ (dermatitis herpetiformis) (ಡಿಹೆಚ್-DH) ಮತ್ತು ಗೋಧಿ ಅಲರ್ಜಿಯಿಂದ ಬಳಲುತ್ತಿರುವವರಲ್ಲಿ ಗ್ಲುಟನ್(Gluten) ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. "ಗ್ಲುಟನ್-ಫ್ರೀ ಡಯಟ್ (Gluten-Free Diet)" ಎನ್ನುವುದು ಗ್ಲುಟನ್(Gluten) ಅಲರ್ಜಿ ಇರುವ ರೋಗಿಗಳಿಗೆ ಅಜೀವ ಪರ್ಯಂತದ ಚಿಕಿತ್ಸೆಯಾಗಿದೆ. ಭಾರತದಲ್ಲಿ, ಸೆಲಿಯಾಕ್ ಡಿಸೀಸ್(celiac disease) ದರದ ಪ್ರಮಾಣವು ಶೇಕಡಾ 1% ರಷ್ಟಿದ್ದು, ಇದು ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಸಿಎಫ್‌ಟಿಆರ್‌ಐ, ಸೆಲಿಯಾಕ್ ಡಿಸೀಸ್(celiac disease) ರೋಗಿಗಳ ಅಗತ್ಯವನ್ನು ಪೂರೈಸಲು ಗ್ಲುಟನ್ ಫ್ರೀ ಕುಕೀಸ್ (Gluten Free Cookies), ಬ್ರೆಡ್ (Bread), ಮಫಿನ್ (Muffin) ಮತ್ತು ಬಿಸ್ಕತ್ತುಗಳಂತಹ ವಿವಿಧ ಗ್ಲುಟನ್ ಫ್ರೀ (Gluten Free) ಬೇಕರಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.


ಕಾರ್ಬೊನೇಟೆಡ್ (Carbonated) ಪಾನೀಯಗಳು

ಕಾರ್ಬೊನೇಟೆಡ್ (Carbonated) ಪಾನೀಯ ಮಾರುಕಟ್ಟೆಯಲ್ಲಿ, ಸಂಶ್ಲೇಷಿತ ಬಣ್ಣಗಳು ಮತ್ತು ಹಣ್ಣಿನ ರಸವಿಲ್ಲದ ಬರಿಯ ಸುವಾಸನೆ ಹೊಂದಿರುವ ಕಾರ್ಬೊನೇಟೆಡ್ (Carbonated) ಪಾನೀಯಗಳು ಪ್ರಾಬಲ್ಯವನ್ನು ಹೊಂದಿವೆ. ಮೈಸೂರಿನ ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಲ್ಲಿ ನಡೆಸಿದ ಪ್ರಾಥಮಿಕ ಸಂಶೋಧನೆಯಲ್ಲಿ ಆಯ್ದ ಹಣ್ಣುಗಳ ರಸವನ್ನು ಕಾರ್ಬೊನೇಟ್ (Carbonate) ಮಾಡಿ, ಹೆಚ್ಚು ಸ್ವೀಕಾರಾರ್ಹ ಪಾನೀಯಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಸೂಚಿಸಿದೆ. ಪಾನೀಯ ಮಾರುಕಟ್ಟೆಯು ಪ್ರತಿವರ್ಷ 30% ಕ್ಕಿಂತ ಹೆಚ್ಚು ಬೆಳೆಯುತ್ತಿರುವುದರಿಂದ, ಹಣ್ಣಿನ ರಸದ ಪಾನೀಯಗಳನ್ನು ಕಾರ್ಬೊನೇಷನ್ (Carbonation) ಮಾಡಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಅಗತ್ಯವಾಗಿದೆ. ದ್ರಾಕ್ಷಿ, ಮಾವು, ದಾಳಿಂಬೆ, ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ಹಣ್ಣಿನ ರಸದಿಂದ ಕಾರ್ಬೊನೇಟೆಡ್ (Carbonated) ಹಣ್ಣಿನ ರಸದ ಪಾನೀಯಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಎಫ್‌ಎಸ್‌ಎಸ್‌ಎ (FSSA) ನಿಯಮಾವಳಿಗಳ ಪ್ರಕಾರ ಅಗತ್ಯವಿರುವ ಹಣ್ಣಿನ ರಸವನ್ನು ಹೊಂದಿರುವ ಕಾರ್ಬೊನೇಟೆಡ್ (Carbonated) ಹಣ್ಣಿನ ರಸದ ಪಾನೀಯಗಳನ್ನು ತಯಾರಿಸಲು ತಂತ್ರಜ್ಞಾನವು ಶಕ್ತವಾಗಿದೆ. ಈ ಕಾರ್ಬೊನೇಟೆಡ್ (Carbonated) ಹಣ್ಣಿನ ರಸದ ಪಾನೀಯಗಳು ಹೆಚ್ಚು ಸ್ವೀಕಾರಾರ್ಹವಾಗಿವೆ ಮತ್ತು ಇದರ ಶೆಲ್ಫ್ (shelf) ಲೈಫ್ (life) ಮತ್ತು ಪೌಷ್ಠಿಕಾಂಶದ ಗುಣಮಟ್ಟದ ಕುರಿತು ಹೆಚ್ಚಿನ ಅಧ್ಯಯನಗಳು ಪ್ರಗತಿಯಲ್ಲಿವೆ. ಈ ಪಾನೀಯಗಳನ್ನು 200 ಮಿಲಿ ಯಿಂದ 500 ಮಿಲಿ ಬಾಟಲಿಗಳಲ್ಲಿ ಹಾಕಿ ಮಾರಾಟ ಮಾಡಬಹುದು.


ಓಸ್ಮೋ(Osmo) - ಡ್ರೈಡ್ (dried) ಹಣ್ಣುಗಳು (ಮಾವು, ಅನಾನಸ್, ಹಲಸಿನ ಹಣ್ಣು ಮತ್ತು ನೆಲ್ಲಿಕಾಯಿ)

ಉತ್ತಮ ಬಣ್ಣ ಮತ್ತು ಸುವಾಸನೆಯ ಗುಣಲಕ್ಷಣಗಳನ್ನು ಉಳಿಸಿಕೊಂಡು ಗುಣಮಟ್ಟದ ಉತ್ಪನ್ನವನ್ನು ಪಡೆಯಲು ಓಸ್ಮೋ(Osmo)-ಒಣಗಿಸುವಿಕೆಯು ಒಂದು ಹೊಸ ವಿಧಾನವಾಗಿದೆ. ಓಸ್ಮೋಸಿಸ್(osmosis) ಪ್ರಕ್ರಿಯೆಯ ಕಾರಣದಿಂದಾಗಿ, ಒಣಗಿಸುವ ಕಾರ್ಯಾಚರಣೆಗಳಲ್ಲಿ ಬೇಕಾಗುವ ಶಕ್ತಿಯ ಬಳಕೆಯಲ್ಲಿ ಇಳಿಕೆ ಕಂಡುಬರುತ್ತದೆ. ಓಸ್ಮೋ(Osmo)-ಒಣಗಿಸುವಿಕೆಯ ನಂತರ ಸಾಂದ್ರತೆಯ ಕಡಿತದಿಂದ ಉತ್ಪನ್ನವು ನಿರ್ದಿಷ್ಟವಾದ ರಚನೆಯನ್ನು ಹೊಂದುತ್ತದೆ. ಓಸ್ಮೋ(Osmo)-ಒಣಗಿದ ಹಣ್ಣುಗಳು ಉತ್ತಮ ಅಗಿಯುವ ಸಾಮರ್ಥ್ಯದೊಂದಿಗೆ ತಿನ್ನಲು ಸಿದ್ಧವಾದ [ಆರ್ಟಿಇ(RTE)] ಉತ್ಪನ್ನವಾಗಿವೆ. ಈ ಉತ್ಪನ್ನಗಳು ಕಡಿಮೆ ತೇವಾಂಶ ಮತ್ತು ಕಡಿಮೆ ನೀರಿನ ಚಟುವಟಿಕೆಯನ್ನು ಹೊಂದಿವೆ, ಆದ್ದರಿಂದ ಅವು ಸೂಕ್ಷ್ಮಜೀವಿಗಳಿಂದ ಸುರಕ್ಷಿತವಾಗಿರುವ ಮತ್ತು ಸ್ಥಿರವಾದ ಉತ್ಪನ್ನವಾಗಿದ್ದು, ಪ್ಯಾಕ್(pack) ಮಾಡಿ ಇಟ್ಟರೆ ದೀರ್ಘಕಾಲದ ಶೆಲ್ಫ್(shelf) ಲೈಫ್(life) ಅನ್ನು ಹೊಂದಿರುತ್ತವೆ. ಓಸ್ಮೋ(Osmo)-ಒಣಗಿದ ಉತ್ಪನ್ನಗಳು ಪೊಟ್ಯಾಸಿಯಮ್(potassium) ಮತ್ತು ಕ್ಯಾಲ್ಸಿಯಂ(calcium) ನಂತಹ ಖನಿಜಗಳ ಉತ್ತಮ ಮೂಲಗಳಾಗಿವೆ.


ಬಾಳೆದಿಂಡು ಪಾನೀಯ ಮತ್ತು ಪಾನೀಯ ಮಿಶ್ರಣಗಳು

ಬಾಳೆದಿಂಡು ಹಣ್ಣುಗಳನ್ನು ಕೊಯ್ಲು ಮಾಡಿದ ನಂತರದ ಕೃಷಿಯ ತ್ಯಾಜ್ಯವಾಗಿದೆ. ದಿಂಡಿನ ಹೊರ ಪೊರೆಯನ್ನು ಫೈಬರ್ (fibre) ನ ಮೂಲವಾಗಿ ಬಳಸಲಾಗುತ್ತದೆ. ಫೀನಾಲಿಕ್ಸ್ (phenolics) ಮತ್ತು ಖನಿಜಗಳಿಂದ ತುಂಬಿದ ದಿಂಡಿನ ಒಳಭಾಗವನ್ನು ವಿವಿಧ ಉತ್ಪನ್ನಗಳ ಅಭಿವೃದ್ಧಿಗೆ ಬಳಸಬಹುದು. ಬಾಳೆ ದಿಂಡಿನಿಂದ ತೆಗೆದ ರಸವು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಉತ್ತಮ ಪರಿಹಾರವಾಗಿದೆ. ಮೂತ್ರಪಿಂಡ, ಪಿತ್ತಕೋಶ ಮತ್ತು ಪ್ರೊಸ್ಟೇಟ್ (prostate) ಗ್ರಂಥಿಯ ಕಲ್ಲುಗಳನ್ನು ತೆಗೆದುಹಾಕುವ ಚಿಕಿತ್ಸೆಯಲ್ಲಿ ಇದು ಹೆಚ್ಚು ಸಹಾಯಕಾರಿಯಾಗಿದೆ ಎಂದು ಕಂಡುಬಂದಿದೆ. ಬಾಳೆದಿಂಡಿನ ಲಭ್ಯತೆ ಮತ್ತು ಅದರಿಂದ ರಸವನ್ನು ಹೊರತೆಗೆಯುವ ವಿಧಾನ ಕ್ಲಿಷ್ಟಕರವಾಗಿರುವುದರಿಂದ, ಪ್ಯಾಕೇಜು ಮಾಡುವ ವಸ್ತುವಿನ ಗುಣಮಟ್ಟದ ಆಧಾರದ ಮೇಲೆ 3 ರಿಂದ 6 ತಿಂಗಳ ಶೆಲ್ಫ್ (shelf) ಲೈಫ್ (life) ಇರುವ ಬಾಳೆದಿಂಡಿನ ಪಾನೀಯವನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಉತ್ಪನ್ನವನ್ನು ಔಷಧವಾಗಿ ಸೇವಿಸಬಹುದು. ಇದರಲ್ಲಿ ಫೀನಾಲಿಕ್ಸ್ (phenolics), ಟ್ಯಾನಿನ್ (tannins) ಮತ್ತು ಖನಿಜಗಳ ಅಂಶಗಳು ಹೆಚ್ಚಾಗಿರುವುದರಿಂದ ಇದರ ಬಳಕೆ ಸೀಮಿತವಾಗಿದೆ. ಈ ಉತ್ಪನ್ನವನ್ನು ಹೆಚ್ಚು ರುಚಿಕರವಾಗಿಸಲು ಸೂಕ್ತವಾದ ಹಣ್ಣಿನ ರಸ ಅಥವಾ ಮಸಾಲೆ ಪದಾರ್ಥಗಳನ್ನು ಬೆರೆಸುವ ಮೂಲಕ ಇದರ ಒಗರು ರುಚಿಯನ್ನು ಬದಲಾಯಿಸಲಾಗಿದೆ.


ಧಾನ್ಯ ಆಧಾರಿತ ಆಹಾರಗಳು

ಉದ್ದೇಶ ಸಾಧಕ ಆಹಾರ ಪದಾರ್ಥಗಳ ಮೂಲವಾಗಿ ಧಾನ್ಯ ಆಧಾರಿತ ಆಹಾರವನ್ನು ಹೆಚ್ಚು ಸೇವಿಸುವ ಪರಿಕಲ್ಪನೆಯು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಉದಾಹರಣೆಗೆ, ಬಿರುಸು ಧಾನ್ಯಗಳಾದ ಬಿಳಿ ಜೋಳ, ಮೆಕ್ಕೆಜೋಳ ಮತ್ತು ಸಜ್ಜೆಯು, ಕರಗದ ನಾರು, ಪಿಷ್ಟರಹಿತ ಪಾಲಿಸ್ಯಾಕರೈಡ್(polysaccharide), ಹೈಡ್ರೋಫೋಬಿಕ್(hydrophobic) ಪ್ರೋಟೀನ್‌(protein) ಮುಂತಾದವುಗಳ ಅಂಶಗಳನ್ನು ಹೆಚ್ಚಾಗಿ ಹೊಂದಿರುವುದರಿಂದ, ಸ್ಥೂಲಕಾಯದ ಜನರಿಗೆ ಹೆಚ್ಚು ಸೂಕ್ತವಾದ ಆಹಾರವಾಗಿವೆ. ನವಣೆ, ಬರಗು, ಊದಲಿನಂತಹ ಸಿರಿಧಾನ್ಯಗಳು ಕ್ಯಾರೊಟಿನಾಯ್ಡ್ (carotenoid), ಟೊಕೊಫೆರಾಲ್(tocopherol), ಪಾಲಿಫಿನಾಲ್(polyphenol) ಮತ್ತು ಫ್ಲೇವನಾಯ್ಡ್(flavonoid) ಗಳಂತಹ ಸೂಕ್ಷ್ಮ ಪೋಷಕಾಂಶಗಳ ಮೂಲಗಳಾಗಿವೆ. ಉದಾಹರಣೆಗೆ, ಊದಲು ಸಿರಿಧಾನ್ಯವು, ಉರಿಯೂತವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನೊಳಗೊಂಡಿರುವ ಸಿರೊಟೋನಿನ್ (serotonin) ಅಂಶವನ್ನು ಹೊಂದಿದೆ. ಧಾನ್ಯಗಳು ಮತ್ತು ಸಿರಿಧಾನ್ಯಗಳಿಗೆ ಹೆಚ್ಚಿನ ಗಮನ ನೀಡುತ್ತಿದ್ದು ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತಿದೆ. ಹುರಳಿ ಕಾಳು, ಮಡಿಕೆ ಕಾಳು, ರಾಜಮಾ (ಕರ್ಪೂರದವರೆ), ರೈಸ್ ಬೀನ್, ಜೈವಿಕ ಸಕ್ರಿಯ ಘಟಕಗಳಲ್ಲಿ ಸಮೃದ್ಧವಾಗಿರುವ ಹೆಚ್ಚು ಚಿರಪರಿಚಿತವಲ್ಲದ ದ್ವಿದಳ ಧಾನ್ಯಗಳಿಗೆ ಉದಾಹರಣೆಗಳಾಗಿವೆ. ಸಂಸ್ಕರಿಸಿದ ಧಾನ್ಯಗಳಿಗಿಂತ ಸಂಸ್ಕರಿಸದಿರುವಂತಹ ಧಾನ್ಯಗಳ ಸೇವನೆಯು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ್ದರಿಂದ ಈ ಸಂಸ್ಥೆಯು ವಿವಿಧ ಧಾನ್ಯ ಆಧಾರಿತ ಉದ್ದೇಶ ಸಾಧಕ ಮತ್ತು ಪೌಷ್ಟಿಕ ಆಹಾರಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಮತ್ತು ಇದು ಇಂದಿನ ಪರಿಸ್ಥಿತಿಗೆ ತುಂಬಾ ಅಗತ್ಯವಾಗಿದೆ.


ಉತ್ತಮ ಗುಣಮಟ್ಟದ ಪ್ರೋಟೀನ್(Protein) ನ ಮೂಲ

ಚಿಕಿತ್ಸಕ ಮತ್ತು ಪೌಷ್ಠಿಕಾಂಶದ ಪ್ರಮುಖ ಪ್ರೋಟೀನ್‌(Protein)ಗಳ ಉತ್ಪಾದನೆಗಾಗಿ ಸಹಜ ಮತ್ತು ನಿಯಂತ್ರಿತ ಬ್ಯಾಕ್ಟೀರಿಯಾ ಸಮುದಾಯಗಳಾದ ಲ್ಯಾಕ್ಟೋಕೊಕಸ್(Lactococcus), ಕ್ಲುವೆರೊಮೈಸಸ್(Kluveromyces) ಮತ್ತು ಇ.ಕೋಲಿ(E.coli) ಗಳನ್ನು ಬಳಸಲಾಗುತ್ತದೆ. ಸಮೃದ್ಧವಾಗಿ ಪ್ರೋಟೀನ್‌(Protein) ಹೊಂದಿರುವ ಹಣ್ಣುಗಳು (ಪಪ್ಪಾಯಿಗೆ ಪಪೈನ್), ಮತ್ತು ಬೀಜಗಳು (ಬೆಣ್ಣೆಗಾಗಿ ಮತ್ತು ಹೈಡ್ರೊಲಿಸೇಟ್ ಹಾಗೂ ಕೇಂದ್ರೀಕರಿಸಿದ ಪ್ರೋಟೀನ್ ಗಾಗಿ ನೆಲಗಡಲೆ ಬೀಜ) ಕೆಲವು ಆಹಾರ ಸೇರ್ಪಡೆಗಳ ಉತ್ಪಾದನೆ ಮತ್ತು ಸಮೃದ್ಧ ಪೋಷಕಾಂಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.
ಬೈಫಿಡೋಬ್ಯಾಕ್ಟೀರಿಯಾ (bifidobacteria) ದಲ್ಲಿನ ಪ್ಲೋಮಾರ್ಫಿಸಂ(pleomorphism)ಗೆ ಸಂಬಂಧಿಸಿದ ಅಭಿವೃದ್ಧಿಯು ದೇಶದಲ್ಲಿ ಬೈಫಿಡೋಬ್ಯಾಕ್ಟೀರಿಯಾ(bifidobacteria) ಸಂಶೋಧನೆಯಲ್ಲಿ ಕ್ರಾಂತಿಯುಂಟುಮಾಡುತ್ತದೆ. ಬೈಫಿಡೋಬ್ಯಾಕ್ಟೀರಿಯಾ(bifidobacteria) ನಿರ್ದಿಷ್ಟವಾಗಿ ಪ್ರೋಬಯಾಟಿಕ್ (probiotic) ಸೂಕ್ಷ್ಮಜೀವಿಗಳನ್ನು ಆಹಾರವಾಗಿ ಸ್ವೀಕರಿಸುತ್ತದೆ ಆದರೆ ಇ.ಕೋಲಿ(E.coli) ಅಲ್ಲ. ಆದ್ದರಿಂದ, ಆದ್ಯತೆಯು ಉಪಯುಕ್ತ ಬ್ಯಾಕ್ಟೀರಿಯಾಗಳ ಮೇಲಿದೆ, ಇತರ ಸೂಕ್ಷ್ಮ ಜೀವಿಗಳ ಮೇಲಲ್ಲ. ವೀಕ್ಷಕರಿಗೆ ಕೆಲವು ಚಿತ್ರಗಳನ್ನು ಲಗತ್ತಿಸಲಾಗಿದೆ.


ಹಸಿರು ಕಾಫಿಯಿಂದ ಪಾನೀಯಗಳು  

ಜೈವಿಕ ಸಕ್ರಿಯ ಅಂಶಗಳಿಂದ ಸಮೃದ್ಧವಾಗಿರುವ ಹಸಿರು ಕಾಫಿ ಸಾರವನ್ನು ನೈಸರ್ಗಿಕ ಪಾಲಿಫಿನಾಲ್ (polyphenol) ಸಮೃದ್ಧ ಕಾರ್ಬೊನೇಟೆಡ್ (carbonated) ಮತ್ತು ಕಾರ್ಬೊನೇಟೆಡ್ (carbonated) ಅಲ್ಲದ ಪಾನೀಯಗಳ ತಯಾರಿಕೆಗೆ ಬಳಸಲಾಗುತ್ತದೆ. ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪಾಲಿಫಿನಾಲ್(polyphenol)ನಿಂದ ಸಮೃದ್ಧಗೊಂಡ ಕಾರ್ಬೊನೇಟೆಡ್(carbonated) ಮತ್ತು ಕಾರ್ಬೊನೇಟೆಡ್(carbonated) ಅಲ್ಲದ ಪಾನೀಯಗಳನ್ನು ವರ್ಧಿತ ಆಂಟಿಆಕ್ಸಿಡೆಂಟ್(antioxidant) ಗುಣವುಳ್ಳ ಚೈತನ್ಯ ನೀಡುವ ಪಾನೀಯವಾಗಿ ಬಳಸಬಹುದು.


ಪ್ರೋಬಯಾಟಿಕ್ (Probiotics) ತಣ್ಣನೆಯ ಕಾಫಿ  

>107 ಸಿಎಫ್‌ಯು (CFU) / ಗ್ರಾಂ ಗಿಂತ ಹೆಚ್ಚು ಎಣಿಕೆ ಹೊಂದಿರುವ ಲ್ಯಾಕ್ಟೋಬಾಸಿಲಸ್ (Lactobacillus) ಒಳಗೊಂಡ ಪಾಲಿಫಿನಾಲ್ (Polyphenol) ನಿಂದ ಸಮೃದ್ಧವಾಗಿರುವ ತಣ್ಣನೆಯ ಕಾಫಿಯನ್ನು ಅಭಿವೃದ್ಧಿಪಡಿಸಲಾಗಿದೆ. ಹಸಿರು ಕಾಫಿಯು ತನ್ನ ಸಂಯೋಜನೆ ಮತ್ತು ಪೌಷ್ಠಿಕಾಂಶದ ಪ್ರಯೋಜನದ ದೃಷ್ಟಿಯಿಂದ ಗ್ರಾಹಕರಿಗೆ ಉತ್ತಮವಾಗಿರುತ್ತದೆ.


ದಿಢೀರ್ ಕಾಫಿ ಘನಗಳು  

ಆರೋಗ್ಯಕ್ಕೆ ಪೂರಕವಾಗಿರುವ ಪಾಲಿಫಿನಾಲ್‌ (polyphenol) ಗಳನ್ನು ಹೊಂದಿರುವ ಹಸಿರು ಕಾಫಿಯಿಂದ, ದಿಢೀರ್ ಕಾಫಿಯ ಹೊಸ ರೂಪವನ್ನು ತಯಾರಿಸಲಾಗುತ್ತದೆ. ಯಾವುದೇ ಕೃತಕ ಸುವಾಸನೆ, ರಾಸಾಯನಿಕಗಳ ಸೇರ್ಪಡೆಗಳಿಲ್ಲದೆ ಉತ್ಪನ್ನವು ಕಡಿಮೆ ತೂಕ, ಸುಲಭ ಸಾಗಾಣಿಕೆ, ಸಿಹಿಯಾದ ರುಚಿ ಮತ್ತು ಕಡಿಮೆ ಕ್ಯಾಲೊರಿ(calorie) ಯನ್ನು ಹೊಂದಿರುತ್ತದೆ. ಒಂದು ಘನವನ್ನು ಕುದಿಸಿದ ನೀರಿನಲ್ಲಿ ಹಾಕಿ, ಬೆರೆಸಿ, ಮತ್ತು ನಯವಾದ ಕಾಫಿಯನ್ನು ಆನಂದಿಸಿ. ನೀವು ಎಲ್ಲಿ ಬೇಕಾದರೂ ಈ ಕಾಫಿಯನ್ನು ತಯಾರಿಸಬಹುದು.


ನೈಸರ್ಗಿಕ ಪಾನೀಯಗಳು

ಪಾನೀಯವು ಮಾನವನ ಬಳಕೆಗೆ ಉದ್ದೇಶಿಸಿರುವ ದ್ರವ ರೂಪದ ಆಹಾರ. ಬಾಯಾರಿಕೆಯನ್ನು ನೀಗಿಸುವ ಜೊತೆಗೆ, ಈ ಪಾನೀಯಗಳು ಮಾನವನ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮವಾದ ಪಾನೀಯಗಳ ಬಗ್ಗೆ ನೀವು ಯೋಚಿಸಿದಾಗ, ನೀರು ತಕ್ಷಣವೇ ಮನಸ್ಸಿಗೆ ಬರುತ್ತದೆ, ಆದರೆ ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು ಬೇರೆ ಪಾನೀಯಗಳೂ ಕೂಡ ಲಭ್ಯವಿದೆ. ಕೆಲವು ಪಾನೀಯಗಳು ಅಜೀರ್ಣ ಮುಂತಾದ ಸಣ್ಣ ಕಾಯಿಲೆಗಳನ್ನು ನಿವಾರಿಸುವುದರಿಂದ ಹಿಡಿದು ರೋಗಗಳ ವಿರುದ್ಧ ರಕ್ಷಿಸುವವರೆಗೆ ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಕಬ್ಬು, ನೀರಾ, ಶುಂಠಿ ಮುಂತಾದ ಪಾನೀಯಗಳನ್ನು ಸಿಎಫ್‌ಟಿಆರ್‌ಐ ಅಭಿವೃದ್ಧಿಪಡಿಸಿದೆ ಮತ್ತು ಅನೇಕ ಕೈಗಾರಿಕೆಗಳಿಗೆ ತಂತ್ರಜ್ಞಾನವನ್ನು ನೀಡಿದೆ. ತಾಜಾ ಶುಂಠಿ ಪಾನೀಯವು ರಸಭರಿತವಾದ, ಉಲ್ಲಾಸಕರ ಮತ್ತು ಸಿಹಿಯಾದ ಆಹ್ಲಾದಕರ ಶುಂಠಿಯ ಸುವಾಸನೆಯನ್ನು ಹೊಂದಿರುತ್ತದೆ. ಹಂತ ಹಂತವಾಗಿ ಏರಿಕೆ ಮಾಡುವ ಡಿಗ್ರಿ ಬ್ರಿಕ್ಸ್‌ (degree brix) ಹೊಂದಿರುವ ಸಕ್ಕರೆ ಪಾಕದ ಸಿರಪ್ (syrup) ನಲ್ಲಿ ತಾಜಾ ಶುಂಠಿಯನ್ನು ಮುಳುಗಿಸಿಟ್ಟು ಕ್ಯಾಂಡಿ (candy) ಗಳಾಗಿ ಪರಿವರ್ತಿಸಲಾಗುತ್ತದೆ. ಶುಂಠಿ ತುಂಡುಗಳನ್ನು [ಘನ / ಚೂರು / ಟಿಟ್‌ಬಿಟ್‌ (titbit)] ಸಿರಪ್‌ (syrup) ನಿಂದ ತೆಗೆದು ಪುಡಿಮಾಡಿದ ಸಕ್ಕರೆಯನ್ನು ಲೇಪಿಸಿ, ಗಾಳಿಯಲ್ಲಿ ಒಣಗಿಸಲಾಗುತ್ತದೆ. ಶುಂಠಿ ತುಂಡುಗಳನ್ನು ತೆಗೆದ ನಂತರ ಉಳಿದಿರುವ ಪಾಕಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಬೇರೆಸಿ, ಕಾರ್ಬೊನೇಟ್ (carbonate) ಮಾಡಿ ಶುಂಠಿ ಪಾನೀಯವನ್ನು ಕುಡಿಯಲು ಸಿದ್ಧವಾಗುವಂತೆ ಮಾಡಲಾಗುತ್ತದೆ.
25 ಗ್ರಾಂ ನ ಪಾಕವನ್ನು, 75 ಮಿಲಿ ನೀರು / ಕಾರ್ಬೊನೇಟೆಡ್ (carbonated) ನೀರಿನಲ್ಲಿ, ಕರಗಿಸಿ ತತ್ಕ್ಷಣಕ್ಕೆ ಉಪಯೋಗಿಸಬಲ್ಲಂತಹ ಚೈತನ್ಯದಾಯಕ ಶುಂಠಿ ಪಾನೀಯವನ್ನು ತಯಾರಿಸಬಹುದು. ಶುಂಠಿ ಪಾನೀಯಗಳು ಅಜೀರ್ಣ ಮುಂತಾದ ಸಣ್ಣ ಕಾಯಿಲೆಗಳನ್ನು ನಿವಾರಿಸುವುದರಿಂದ ಹಿಡಿದು ರೋಗಗಳಿಂದ ರಕ್ಷಿಸುವವರೆಗೆ ಅಪಾರ ಆರೋಗ್ಯದ ಪ್ರಯೋಜನಗಳನ್ನು ಹೊಂದಿವೆ. ತಾಜಾ ಶುಂಠಿಯಲ್ಲಿರುವ ಹಲವಾರು ಆರೋಗ್ಯ ಘಟಕಗಳು ಅನೇಕ ಉದ್ದೇಶ ಸಾಧಕ ಆಹಾರ ಉತ್ಪನ್ನಗಳನ್ನು ತಯಾರಿಸಲು ಉಪಯುಕ್ತವಾಗಿವೆ.


ಮಸಾಲೆ ನ್ಯೂಟ್ರಾಸ್ಯುಟಿಕಲ್ಸ್ (Nutraceuticals)

ಜೆರುಂಬೊನ್ (Zerumbone) ಒಂದು ನ್ಯೂಟ್ರಾಸ್ಯುಟಿಕಲ್ (Nutraceutical) ಮತ್ತು ದೈಹಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶುದ್ಧ ಜೆರುಂಬೋನ್ (Zerumbone) ಹರಳುಗಳನ್ನು ತಯಾರಿಸುವುದು ಸರಳ ಪ್ರಕ್ರಿಯೆ. ಜೆರುಂಬೋನ್ (Zerumbone) ಹರಳುಗಳು, ಆಹಾರ ಮತ್ತು ಫಾರ್ಮಾ ಇಂಡಸ್ಟ್ರೀಸ್ (Pharma Industries) ಗಳಲ್ಲಿ ಉಪಯೋಗವನ್ನು ಕಂಡುಕೊಳ್ಳುತ್ತವೆ. ಜಿಂಜಿಬರ್ ಜೆರುಂಬೆಟ್ ಸ್ಮಿತ್ (ZingiberZerumbet Smith), ಆಗ್ನೇಯ ಏಷ್ಯಾದಲ್ಲಿ ಬೆಳೆದ ಉದ್ದವಾದ, ಕಿರಿದಾದ ಎಲೆಗಳೊಂದಿಗೆ 3 ಮೀಟರ್ ಎತ್ತರಕ್ಕೆ ಬೆಳೆಯುವ ಎತ್ತರದ ನೇರ ಶುಂಠಿ. ಆದರೆ ಇದನ್ನು ವಿಶ್ವದಾದ್ಯಂತ ಉಷ್ಣವಲಯ ಮತ್ತು ಉಪ ಉಷ್ಣವಲಯದ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಜೆರುಂಬೊನ್ (Zerumbone), ಜಿಂಜಿಬರ್ ಜೆರುಂಬೆಟ್‌ (ZingiberZerumbet) ನ ಒಂದು ಸೆಸ್ಕ್ವಿಟರ್ಪೀನ್ (sesquiterpene) ಫೈಟೊಕೆಮಿಕಲ್ (phytochemical) ಆಗಿದೆ ಮತ್ತು ಅದರ ಹೆಚ್ಚಿನ ಔಷಧೀಯ ಮೌಲ್ಯಗಳಿಂದಾಗಿ ಜೀವರಾಸಾಯನಿಕ ಅಧ್ಯಯನಕ್ಕೆ ಒಳಪಟ್ಟಿದೆ. ಸೆಸ್ಕ್ವಿಟರ್ಪೀನ್ (sesquiterpene) ಎಂದು ರಾಸಾಯನಿಕವಾಗಿ ಕರೆಯಲ್ಪಡುವ ಜೆರುಂಬೊನ್ (Zerumbone) ಬಣ್ಣರಹಿತ, ಬಿಳಿ ಹರಳುಗಳಂತೆ, ವಿಶಿಷ್ಟ ಸುವಾಸನೆಯನ್ನು ಹೊಂದಿರುತ್ತದೆ, ಜೊತೆಗೆ ಕರಗುವ ಬಿಂದು 62-65° ಸೆ ಮತ್ತು ಅದರ ಎನ್‌ಎಂಆರ್ (NMR) ಸ್ಪೆಕ್ಟ್ರಾ (spectra) ದೊಂದಿಗೆ ರಚನಾತ್ಮಕ ಸ್ಪಷ್ಟೀಕರಣದಿಂದ ಸ್ಥಾಪಿಸಲಾಗಿದೆ. ಸಿಎಸ್ಐಆರ್-ಸಿಎಫ್‌ಟಿಆರ್‌ಐ, ಶುದ್ಧ ಜೆರುಂಬೋನ್ (Zerumbone) ಹರಳುಗಳನ್ನು ತಯಾರಿಸಲು ಸುಲಭವಾದ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ, ಇದು ಆಂಟಿಟ್ಯೂಮರ್ (antitumour), ಉರಿಯೂತದ, ಆಂಟಿ-ಪೈರೆಟಿಕ್ (anti-pyretic), ನೋವು ನಿವಾರಕ ಇತ್ಯಾದಿ ಔಷಧೀಯ ಪ್ರಯೋಜನಗಳಿಗೆ ಕಾರಣವಾಗುತ್ತದೆ.


ಆಹಾರದ ಬಳಕೆಗಾಗಿ ನೈಸರ್ಗಿಕ ಸುವಾಸನೆಯುಕ್ತ ಪದಾರ್ಥಗಳು

ಡೆಕಾಲೆಪಿಶ್ ಹ್ಯಾಮಿಲ್ಟೋನಿ ವೈಟ್ & ಅರ್ನ್ (Decalepis hamiltonii Wight & Arn) ಎಂಬುದು ಒಂದು ಸುವಾಸನಾಯುಕ್ತ ಬೇರು. ಸಾಮಾನ್ಯವಾಗಿ ಸ್ವಾಲೋ ರೂಟ್(swallow root) ಎಂದು ಕರೆಯಲ್ಪಡುವ ಇದನ್ನು ಆಹಾರ ತಯಾರಿಕೆಯಲ್ಲಿ ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ಸಮರ್ಥವಾಗಿ ಉಪಯೋಗಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಇದನ್ನು ಉಪ್ಪಿನಕಾಯಿ ತಯಾರಿಸಲು ಬಳಸಲಾಗುತ್ತದೆ, ಇದು ಉತ್ಪನ್ನಕ್ಕೆ ವಿಶಿಷ್ಟವಾದ ಸುವಾಸನೆ ಮತ್ತು ಶೆಲ್ಫ್ (shelf) ಲೈಫ್ (life) ಅನ್ನು ಒದಗಿಸುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ವಿವಿಧ ಆರೋಗ್ಯ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ ಮತ್ತು ಇದು ರಕ್ತ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಬೇರು ಇತರ ಜೈವಿಕ ಸಕ್ರಿಯ ಸಂಯುಕ್ತಗಳಾದ α & β ಅಮೈರಿನ್ (amyrin) ಗಳು, ಲುಪಿಯೋಲ್ (lupeol) ಮತ್ತು ಅವುಗಳ ಅಸಿಟೇಟ್ (acetate) ಗಳ ಜೊತೆಗೆ ಕೆಲವು ಫೈಟೊ ಸ್ಟೆರಾಲ್ (phyto sterols) ಗಳನ್ನು ಸಹ ಒಳಗೊಂಡಿದೆ. ಈ ಬೇರುಗಳಿಂದ ಅವಶ್ಯಕವಾದ ತೈಲವನ್ನು ಉಗಿ-ಜಲ ಬಟ್ಟಿ ಇಳಿಸುವಿಕೆಯ ವಿಧಾನದಿಂದ ಪ್ರತ್ಯೇಕಿಸಬಹುದು. ಈ ವಿಧಾನದಿಂದ ಬಾಷ್ಪಶೀಲ ಎಣ್ಣೆಯ ಗರಿಷ್ಠ ಇಳುವರಿಯನ್ನು (0.68%) ಪಡೆಯಬಹುದು ಮತ್ತು ಬಾಷ್ಪಶೀಲ ಬಿಳಿ ಸ್ಫಟಿಕದ ಸಂಯುಕ್ತ, 2-ಹೈಡ್ರಾಕ್ಸಿ (hydroxy), 4-ಮೆಥಾಕ್ಸಿ(methoxy) ಬೆಂಜಲ್ಡಿಹೈಡ್ (benzaldehyde) [ಎಚ್‌ಎಂಬಿ (HMB)] ಅನ್ನು ಬೇರ್ಪಡಿಸಬಹುದು. ಇದು ಅವಶ್ಯಕವಾದ ತೈಲದಲ್ಲಿ ಸುಮಾರು 96% ನಷ್ಟಿದೆ. ಇದು ಒಂದು ವಿಶಿಷ್ಟ ಲಕ್ಷಣವಾಗಿದೆ.
ಈ ಘಟಕವು, ವೆನಿಲಿನ್ (vanillin) ಐಸೋಮರ್ (isomer) ಕೂಡ ಆಗಿರುವುದರಿಂದ ವಿವಿಧ ಆಹಾರ ಉತ್ಪನ್ನಗಳಾದ ಸುವಾಸನೆಯ ಹಾಲು, ಸುವಾಸನೆಯ ಐಸ್ ಕ್ರೀಮ್ ಮತ್ತು ಸುವಾಸನೆಯ ಚಹಾ ಇತ್ಯಾದಿಗಳಲ್ಲಿ ಸುವಾಸನಾ ಪದಾರ್ಥವನ್ನಾಗಿ ಉಪಯೋಗಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. ಸುವಾಸನೆಯ ಸಂಯುಕ್ತವು, 10-40 ಪಿಪಿಎಂ (ppm) ಮಟ್ಟದಲ್ಲಿ, ಉತ್ಪನ್ನಗಳಿಗೆ ಆಹ್ಲಾದಕರ ಸುವಾಸನೆಯನ್ನು ನೀಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಸ್ವಾಲೋ (swallow) ಬೇರುಗಳನ್ನು ಉಗಿ/ಜಲ ಶುದ್ಧೀಕರಣಕ್ಕೆ ಒಳಪಡಿಸಲಾಗುತ್ತದೆ. ಡಿಸ್ಟಿಲೇಟ್‌ (distillate) ನ ಸಾವಯವ ಭಾಗವು ಎಚ್‌ಎಮ್‌ಬಿ (HMB) ಯನ್ನು ಪ್ರಮುಖ ವೊಲಟೈಲ್ (volatile) ದ್ರಾವಕವಾಗಿ ಹೊಂದಿದೆ ಮತ್ತು ಧ್ರುವೇತರ ದ್ರಾವಕದಲ್ಲಿ ಬಾಷ್ಪೀಕರಣದ ಆದ್ಯತೆಯ ಮೇಲೆ ಎಚ್‌ಎಮ್‌ಬಿ (HMB) ಯನ್ನು ಹೊರತೆಗೆಯುತ್ತದೆ ಮತ್ತು ನಂತರ ಸ್ಫಟಿಕೀಕರಣಗೊಳಿಸುತ್ತದೆ. ಸ್ಫಟಿಕೀಕರಿಸಿದ ಉತ್ಪನ್ನವನ್ನು ಆಹಾರಗಳಲ್ಲಿ ನೈಸರ್ಗಿಕ ಸುವಾಸನಾ ಪದಾರ್ಥವನ್ನಾಗಿ ಬಳಸಬಹುದು.

Swallow root
HMB Crystals
Flavoured Milk
2-hydroxy,4-methoxy benzaldehyde

ಮೀನು ಜೆಲಾಟಿನ್ (Gelatin) ಮತ್ತು ವೇಫರ್ಸ್ (Wafers)

ಮೀನಿನ, ಚರ್ಮ, ಮೂಳೆ ಮತ್ತು ಚಿಪ್ಪಿನಿಂದ ತಯಾರಿಸಿದ ಮೀನು ಜೆಲಾಟಿನ್ (Gelatin), ಆಹಾರ ಮತ್ತು ಔಷಧೀಯ ಉದ್ಯಮದಲ್ಲಿ ಬಳಸಲು ಸಸ್ತನಿ ಜೆಲಾಟಿನ್ (Gelatin) ಗೆ ಉತ್ತಮ ಪರ್ಯಾಯವಾಗಿದೆ. ಮೀನಿನ ಉಪ ಉತ್ಪನ್ನಗಳಿಂದ ಜೆಲಾಟಿನ್ (Gelatin) ತಯಾರಿಸುವುದು, ಮೀನು ಉದ್ಯಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಮೌಲ್ಯವನ್ನು ಮಾತ್ರವಲ್ಲ, ಉದ್ಯಮದ ಮಾಲಿನ್ಯ ಸಾಮರ್ಥ್ಯವನ್ನು ಕೂಡ ಕಡಿಮೆ ಮಾಡುತ್ತದೆ. ಮೀನಿನ ತ್ಯಾಜ್ಯಗಳಿಂದ ಜೆಲಾಟಿನ್ (Gelatin) ಅನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಸಿಎಫ್‌ಟಿಆರ್‌ಐ ಪ್ರಮಾಣೀಕರಿಸಿದೆ, ಇದು ಕ್ರಿಯಾತ್ಮಕ ಗುಣಲಕ್ಷಣಗಳು ಮತ್ತು ಜೆಲ್ (gel) ಸ್ಟ್ರೆಂಥ್ (strength) ಗೆ ತುಲನೆ ಮಾಡಿದರೆ ಬೋವಿನ್ (bovine) ಜೆಲಾಟಿನ್‌ (Gelatin) ಗೆ ಹೋಲಿಸಬಹುದು. ಹೀಗೆ ಅಭಿವೃದ್ಧಿ ಪಡಿಸಿರುವ ಪ್ರಕ್ರಿಯೆಯಿಂದ ಜೆಲಾಟಿನ್‌ (Gelatin) ಅನ್ನು, ಸಿಹಿನೀರಿನ ಮೀನಿನ ಚರ್ಮ ಮತ್ತು ಚಿಪ್ಪಿನಿಂದ ಮೀನಿನ ವಾಸನೆಯಿಲ್ಲದಂತೆ ತಯಾರಿಸಬಹುದು ಮತ್ತು ಇದನ್ನು ಆಹಾರ ಉತ್ಪನ್ನಗಳಲ್ಲಿ ಜೆಲ್ಲಿಂಗ್ ಏಜೆಂಟ್ (gelling agent) ಆಗಿ ಬಳಸಬಹುದು. ವೇಫರ್‌ (Wafer) ಗಳು, ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಇಷ್ಟಪಡುವ ಗರಿಗರಿಯಾದ ಆಹಾರ ತಿಂಡಿಗಳಾಗಿವೆ. ಕೋಳಿ, ಮೊಟ್ಟೆ, ಮೀನು, ಮಾಂಸ, ಹಂದಿಮಾಂಸ ಮತ್ತು ಸೀಗಡಿ ಮೀನಿನಿಂದ ಮಾಸಾಹಾರಿ ವೇಫರ್‌ (Wafer) ಗಳನ್ನು ಪರಿಚಯಿಸುವ ಮೂಲಕ ಸಿಎಫ್‌ಟಿಆರ್‌ಐ ನಮ್ಮ ನಾಲಿಗೆಗೆ ಹೊಸ ರುಚಿಯನ್ನು ತಂದಿದೆ. ಈ ವೇಫರ್‌ (Wafer) ಗಳು ಪ್ರೋಟೀನ್ (protein) ನಿಂದ ಸಮೃದ್ಧವಾಗಿವೆ ಮತ್ತು ತಿನ್ನಲು ಸಿದ್ಧವಾಗಿರುವ ಆಹಾರವಾಗಿದೆ.


ಮೊಟ್ಟೆಯ ಭಕ್ಷ್ಯಗಳು

ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ (protein), ಜೀವಸತ್ವಗಳು ಮತ್ತು ಆಹಾರ ಖನಿಜಗಳಿಂದ ಸಮೃದ್ಧವಾಗಿ ಮತ್ತು ಜನರಿಗೆ ಆರೋಗ್ಯಕರವಾದ ಆಹಾರದ ಆಯ್ಕೆಯಾಗಿದೆ. ಮೊಟ್ಟೆಗಳು ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ ಮತ್ತು ಇದನ್ನು ಪೌಷ್ಠಿಕಾಂಶ ದಟ್ಟವಾಗಿರುವ ಆಹಾರವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಮೊಟ್ಟೆಗಳು ಬಹುಮಟ್ಟಿಗೆ ಪರಿಪೂರ್ಣ ಆಹಾರವಾಗಿದೆ. ಅವು ನಮಗೆ ಅಗತ್ಯವಿರುವ ಪ್ರತಿಯೊಂದು ಪೋಷಕಾಂಶಗಳನ್ನು ಸ್ವಲ್ಪಮಟ್ಟಿಗೆ ಒಳಗೊಂಡಿರುತ್ತವೆ. ಮೊಟ್ಟೆಗಳು ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವ ಆದರೆ ಕಡಿಮೆ ಪ್ರಮಾಣದಲ್ಲಿ ಅಗತ್ಯವಿರುವ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ. ದಿನಕ್ಕೆ ಒಂದು ಮೊಟ್ಟೆ ವೈದ್ಯರನ್ನು ನಮ್ಮಿಂದ ದೂರವಿರಿಸುತ್ತದೆ. ಮೊಟ್ಟೆಯ ಪನೀರ್, ಎಣ್ಣೆಯಲ್ಲಿ ಕರಿದ ಮೊಟ್ಟೆಯ ಘನಗಳು ಮತ್ತು ನಿರ್ಜಲೀಕರಣಗೊಂಡ ಮೊಟ್ಟೆಯ ಘನಗಳು ಸೇರಿದಂತೆ ‘ಶೆಲ್ಫ್-ಸ್ಟೇಬಲ್’ (shelf-stable) ಮೊಟ್ಟೆಯ ಖಾದ್ಯಗಳನ್ನು ತಯಾರಿಸಲು ಸಿಎಫ್‌ಟಿಆರ್‌ಐ ದಾರಿ ಮಾಡಿಕೊಟ್ಟಿದೆ. ಮೊಟ್ಟೆಯ ಘನಗಳನ್ನು ಮೊಟ್ಟೆಯ ಅಲ್ಬುಮಿನ್ (albumin) ಅಥವಾ ಮೊಟ್ಟೆಯ ಹಳದಿ ಲೋಳೆ ಅಥವಾ ಇಡೀ ಮೊಟ್ಟೆಯ ದ್ರವದಿಂದ ತಯಾರಿಸಬಹುದು. ಈ ಮೊಟ್ಟೆಯ ಘನಗಳನ್ನು ಸಾರಿನ ತಯಾರಿಕೆಯಲ್ಲಿ ಬಳಸಬಹುದು. ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯಂತಹ ವಿವಿಧ ರುಚಿಗಳಲ್ಲಿ ಲಭ್ಯವಿರುವ ಮೊಟ್ಟೆಯ ಕುರುಕಲು ಬಾಯಲ್ಲಿ ನೀರೂರಿಸುವ ಮೊಟ್ಟೆಯ ಖಾದ್ಯಗಳಲ್ಲಿ ಒಂದಾಗಿದೆ. ಮೊಟ್ಟೆಯ ಕುರುಕುಲುಗಳನ್ನು ತಿನಿಸಾಗಿ ಬಳಸಬಹುದು. ಗಮನಾರ್ಹ ಲಕ್ಷಣವೆಂದರೆ, ಈ ಎಲ್ಲಾ ಉತ್ಪನ್ನಗಳು ಸಾಮಾನ್ಯ ಉಷ್ಣಾಂಶದಲ್ಲಿ ಸಂಗ್ರಹ ಮಾಡಿದಾಗ 6 ತಿಂಗಳುಗಳ ಕಾಲ ಕೆಡದೆ ಉಳಿಯಬಲ್ಲದು ಇವು ಮತ್ತು ಯಾವುದೇ ರಾಸಾಯನಿಕಗಳು ಮತ್ತು ಸಂಶ್ಲೇಷಿತ ಸಂರಕ್ಷಕಗಳನ್ನು ಹೊಂದಿರುವುದಿಲ್ಲ