ಸಿಎಸ್ಐಆರ್-ಸಿಎಫ್‌ಟಿಆರ್‌ಐ, ಹಸಿರು ನೆಲ್ಲಿಕಾಯಿ ಪುಡಿಯನ್ನು ತಯಾರಿಸುವ ಒಂದು ನವೀನ ತಂತ್ರಜ್ಞಾನಕ್ಕೆ ಪೇಟೆಂಟ್ (patent) ಅನ್ನು ಪಡೆದಿದೆ, ಇದು ಸಾಂಪ್ರದಾಯಿಕ / ಪ್ರಸ್ತುತ ಅಭ್ಯಾಸಗಳಿಗಿಂತ ಸಾಕಷ್ಟು ಭಿನ್ನವಾಗಿದೆ ಮತ್ತು ಈ ವಿಧಾನದಲ್ಲಿ ತಯಾರಿಸಿದ ನೆಲ್ಲಿಕಾಯಿ ಪುಡಿಯು ನೈಸರ್ಗಿಕ ಹಸಿರು ಬಣ್ಣದೊಂದಿಗೆ ಉತ್ತಮ ಸುವಾಸನೆಯನ್ನು ಹೊಂದಿದೆ. ಈ ಪ್ರಕ್ರಿಯೆಯಲ್ಲಿರುವ ಹಂತಗಳೆಂದರೆ, ಹಸಿರು ನೆಲ್ಲಿಕಾಯಿಗಳನ್ನು ಮಾಗಿದ ನೆಲ್ಲಿಕಾಯಿಗಳಿಂದ ಶ್ರೇಣೀಕರಿಸುವುದು / ಬೇರ್ಪಡಿಸುವುದು ನಂತರ ಮಣ್ಣು, ಕಲ್ಲು, ಕೊಳಕು ಮತ್ತು ಇತರ ವಸ್ತುಗಳನ್ನು ತೆಗೆದುಹಾಕಲು 70∼80o ಸೆ. ನಡುವಿನ ತಾಪಮಾನದಲ್ಲಿ ಬಿಸಿನೀರಿನೊಂದಿಗೆ ಚೆನ್ನಾಗಿ ತೊಳೆಯುವುದು, ತೊಳೆದ ನೆಲ್ಲಿಕಾಯಿಗಳ ಮೇಲ್ಮೈ ತೇವಾಂಶವನ್ನು ತೆಗೆದುಹಾಕಲು ಗಾಳಿ / ನೆರಳಿನಲ್ಲಿ ಒಣಗಿಸುವುದು ಮತ್ತು ಅಗತ್ಯವಾದ ಕಣಗಳ ಗಾತ್ರವನ್ನು ಪಡೆಯಲು ವಿಶೇಷವಾಗಿ ಮೀಸಲಾಗಿರಿಸಿದ ತುರಿಯುವ ಯಂತ್ರವನ್ನು ಬಳಸಿ ತುರಿಯುವುದು ಮತ್ತು ನಂತರ ಸೋಡಿಯಂ ಕ್ಲೋರೈಡ್ (Sodium Chloride) ನೊಂದಿಗೆ ಗ್ರೇಟಿಂಗ್ (grating)ಗಳನ್ನು ರೂಪಿಸುವುದು. ಮೊದಲೇ ನಿರ್ಧರಿಸಿದ ಪ್ರಮಾಣದಲ್ಲಿ ಗ್ರೇಟಿಂಗ್ (grating)ಗಳನ್ನು ಸ್ಟೇನ್‌ಲೆಸ್-ಸ್ಟೀಲ್ (stainless-steel) ತಟ್ಟೆಗಳಲ್ಲಿ ಹರಡಿ, 8∼10 ಗಂಟೆಗಳವರೆಗೆ ಕ್ಯಾಬಿನೆಟ್ ಡ್ರೈಯರ್ (cabinet drier) ಗೆ ಲೋಡ್ (load) ಮಾಡಲಾಗುತ್ತದೆ, ಇದನ್ನು 40∼50o ಸಿ ತಾಪಮಾನದಲ್ಲಿ ಒಣಗಿಸಲಾಗುತ್ತದೆ.
ಒಣಗಿದ ಹಸಿರು ನೆಲ್ಲಿಕಾಯಿ ಪುಡಿಯನ್ನು ಗ್ರ್ಯಾನ್ಯುಲೇಟರ್ (granulator) ಬಳಸಿ ಏಕರೂಪಗೊಳಿಸಲಾಗುತ್ತದೆ ಮತ್ತು ಗ್ರೇಟಿಂಗ್ (grating)ಗಳ ಗಾತ್ರವು 2∼3 ಮಿಮೀ ವ್ಯಾಪ್ತಿಯಲ್ಲಿರುವಂತೆ ಮಾಡಲಾಗುತ್ತದೆ. ಹರಳಾಗಿಸಿದ ಪುಡಿಯನ್ನು ಅಪಾರದರ್ಶಕ ಪಾಲಿಥಿಲೀನ್ (polyethylene) ಚೀಲಗಳಲ್ಲಿ ಪ್ಯಾಕ್ (pack) ಮಾಡಿ ಪೆಟ್ಟಿಗೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಸುವಾಸನೆ ಮತ್ತು ಬಣ್ಣವನ್ನು ಉಳಿಸಿಕೊಳ್ಳಲು ಯಾವುದೇ ಸೇರ್ಪಡೆಗಳನ್ನು ಬಳಸಲಾಗುವುದಿಲ್ಲ. ಹಸಿರು ನೆಲ್ಲಿಕಾಯಿ ಪುಡಿಯು ಥರ್ಮೋ (thermo) ಸ್ಟೇಬಲ್ (stable) ಚೀಲಗಳಲ್ಲಿ 37 ± 2 o ಸಿ ತಾಪಮಾನದಲ್ಲಿ 3 ತಿಂಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿರುತ್ತದೆ.
ಅಧಿಕ ಒತ್ತಡ ವ್ಯವಸ್ಥೆಯನ್ನು ಬಳಸಿಕೊಂಡು ಪ್ರಸ್ತುತ ಈ ಕೆಳಗಿನ ವಿಷಯಗಳು ಪ್ರಗತಿಯಲ್ಲಿವೆ:
ಬಯೋಆಕ್ಟಿವ್ (bioactive) ಸಂಯುಕ್ತ [ಆಂಥೋಸಯಾನಿನ್ (anthocyanin)] ಅಥವಾ ಕರ್ಕ್ಯುಮಿನಾಯ್ಡ್ಸ್ (curcuminoids)) ಗಳನ್ನು ಘನ ಆಹಾರ ಮ್ಯಾಟ್ರಿಕ್ಸ್ (matrix) ನ ಒಳಕ್ಕೆ ಸೇರ್ಪಡಿಸುವುದು, ಶುಂಠಿಯಿಂದ ಒಲಿಯೊರೆಸಿನ್ (oleoresin) ಮತ್ತು ಜಿಂಜರಾಲ್ (gingerol) ಅನ್ನು ಹೊರತೆಗೆಯುವುದು, ಕಬ್ಬಿನ ರಸ ಮತ್ತು ಎಳನೀರಿನ ಸಂಸ್ಕರಣೆಯನ್ನು ಮಾಡುವುದು.
ಭೌತ-ರಾಸಾಯನಿಕ ಮತ್ತು ಪೌಷ್ಠಿಕಾಂಶದ ಗುಣಲಕ್ಷಣಗಳಲ್ಲಿ ಅನಗತ್ಯ ಬದಲಾವಣೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ, ಸೂಕ್ಷ್ಮ ಜೀವವಿಜ್ಞಾನದ ಸುರಕ್ಷಿತ ಆಹಾರದ ಗುರಿಯನ್ನು ಹೊಂದಿರುವ ಉಷ್ಣೇತರ ಸಂಸ್ಕರಣಾ ತಂತ್ರಜ್ಞಾನವನ್ನು ಅಧಿಕ ಒತ್ತಡ ಸಂಸ್ಕರಣೆಯು ಕೊಡುತ್ತದೆ. ಅಧಿಕ ಒತ್ತಡವು ಜೀವಕೋಶ ಪೊರೆಗಳ ಪ್ರವೇಶಸಾಧ್ಯತೆಯಿಂದ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
ಅಧಿಕ-ಒತ್ತಡದ ಪ್ರಯೋಗವು ಆಹಾರದ ಗುಣಮಟ್ಟದ ಸಂಬಂಧಿತ ಕಿಣ್ವಗಳ (ಆಕ್ಸಿಡೇಸ್(oxidase)) ಚಟುವಟಿಕೆಯ ಪರಿಣಾಮವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಇದು ಉತ್ತಮ ಗುಣಮಟ್ಟದ ಮತ್ತು ಶೆಲ್ಫ್ (shelf) ಸ್ಟೇಬಲ್ (stable) ಉತ್ಪನ್ನಗಳನ್ನು ಖಾತ್ರಿಗೊಳಿಸುತ್ತದೆ. ಇದಲ್ಲದೆ, ಅಧಿಕ ಒತ್ತಡವು ನಾನ್ ಕೋವೇಲನ್ಸ್ (non-covelence) ಬಾಂಡ್(bond) [ಹೈಡ್ರೋಜನ್ (hydrogen), ಅಯಾನಿಕ್ (ionic) ಮತ್ತು ಹೈಡ್ರೋಫೋಬಿಕ್ ಬಾಂಡ್ (hydrophobic bond)] ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಮತ್ತು ಸುವಾಸನೆ, ಬಣ್ಣ ಅಥವಾ ಪೌಷ್ಠಿಕಾಂಶದಂತಹ ಅಪೇಕ್ಷಣೀಯ ಆಹಾರ ಗುಣಗಳೊಂದಿಗೆ ಸಂಬಂಧಿಸಿದ ರಾಸಾಯನಿಕ ಘಟಕಗಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
ಮೆಂಬ್ರೇನ್ (Membrane) ಬಳಸಿ ಖಾದ್ಯ ತೈಲಗಳ ಹೊರತೆಗೆಯುವಿಕೆ ಮತ್ತು ಸಂಸ್ಕರಣೆಯ ಮೇಲೆ ಪ್ರಸ್ತುತ ಸಂಶೋಧನೆಯು ಕೇಂದ್ರೀಕರಣಗೊಂಡಿದೆ. ಇದರಿಂದ ಸಸ್ಯಜನ್ಯ ತೈಲ ಸಂಸ್ಕರಣಾ ಉದ್ಯಮಗಳಲ್ಲಿ ಬಹಳಷ್ಟು ಶಕ್ತಿಯ ಉಳಿತಾಯಕ್ಕೆ ಸಾಧ್ಯವಾಗುತ್ತದೆ.
ಆಹಾರ ಸಾಮಗ್ರಿಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕಠಿಣತೆಯನ್ನು ಕಡಿಮೆ ಮಾಡಲು ಸರಳ ಆಹಾರ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗುತ್ತಿದೆ. ಹಸಿರು ನೆಲ್ಲಿಕಾಯಿ ಪುಡಿಯ ಉತ್ಪಾದನೆಯ ಉಪಕರಣವು ಈ ವರ್ಗದ ಇತ್ತೀಚಿನ ಸೇರ್ಪಡೆಯಾಗಿದೆ.
ಸ್ಮಾರ್ಟ್ ಪ್ಯಾಕೇಜಿಂಗ್ (Smart Packaging) ನ ಪ್ರಕ್ರಿಯೆಯಲ್ಲಿ, ಪ್ಯಾಕೇಜ್ (package) ನ ಮೇಲೆ ಬಾಹ್ಯ ಅಥವಾ ಆಂತರಿಕ ಸೂಚಕವು ಇರುತ್ತದೆ. ಈ ಸೂಚಕವು ಪ್ಯಾಕೇಜಿನ ಇತಿಹಾಸ ಮತ್ತು/ಅಥವಾ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಹಾಲು ಹಾಳಾಗುವ ಸೂಚಕವನ್ನು ಲ್ಯಾಕ್ಟಿಕ್ (lactic) ಆಮ್ಲದ ಪ್ರಸರಣದ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಮಾರ್ಪಡಿಸಲಾಗದ ಸೂಚಕದ ಬಣ್ಣ ಬದಲಾವಣೆಯು (ತಿಳಿ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ) ಸ್ಪಷ್ಟವಾಗಿ ಮತ್ತು ಹಂತಹಂತವಾಗಿ ಹಾಲು ಹಾಳಾಗುವುದನ್ನು ತೋರಿಸುತ್ತದೆ. ಹಾಲು ಹಾಳಾಗುವುದನ್ನು ಪತ್ತೆಹಚ್ಚಲು ಈ ಸೂಚಕವನ್ನು ಬಾಹ್ಯ ಮತ್ತು ಆಂತರಿಕ ಸೂಚಕವಾಗಿ ಬಳಸಲಾಗುತ್ತದೆ. ಈ ಸೂಚಕವನ್ನು ಹಾಲಿನ ಪ್ಯಾಕೆಟಿನಲ್ಲಿ ಏಕ ದಿಕ್ಕಿನ ಮೆಂಬ್ರೇನ್ (membrane)ನ ಸಹಾಯದಿಂದ ಸಂಯೋಜಿಸಲಾಗಿದೆ. ಏಕ ದಿಕ್ಕಿನ ಮೆಂಬ್ರೇನ್ (membrane), ಹಾಲಿನಿಂದ ಸೂಚಕಕ್ಕೆ ಹರಿಯುವ ದಿಕ್ಕನ್ನು ಮಾತ್ರ ಅನುವು ಮಾಡಿರುತ್ತದೆ ಮತ್ತು ಹಿಂಬಾಗದ ಹರಿವನ್ನು ತಪ್ಪಿಸಿ ಹಾಲಿಗೆ ಬರುವುದನ್ನು ತಡೆಯುತ್ತದೆ. ಇದು ಆಹಾರದ ಗುಣಮಟ್ಟದ ನಷ್ಟವನ್ನು ತಡೆಯಲು ಸಹಕರಿಸುತ್ತದೆ.
ಎಂಪ್ಯಾಕ್ (MPACK), ತೇವಾಂಶ ಸೂಕ್ಷ್ಮ ಆಹಾರಗಳಿಗೆ ಪ್ಯಾಕೇಜಿಂಗ್ (packaging) ಮಾಡುವ ವಿನ್ಯಾಸಕ್ಕಾಗಿ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ (software) ಆಗಿದ್ದು, ಇದು ಸ್ಥಿರ ತಾಪಮಾನ ಮತ್ತು ಆರ್‌ಹೆಚ್ (RH) ನ ಸ್ಥಿರ ಸ್ಥಿತಿಯ ಶೇಖರಣಾ ವಿಧಾನಗಳ ಜೊತೆಗೆ, ಭಾರತದ 22 ಹವಾಮಾನ ಕೇಂದ್ರಗಳ ದೈನಂದಿನ ಶೇಖರಣಾ ಪರಿಸ್ಥಿತಿಗಳೊಟ್ಟಿಗೆ ಸಿಮುಲೇಟ್ (simulate) ಮಾಡಲು ವ್ಯವಸ್ಥೆಯನ್ನು ಹೊಂದಿದೆ. ಆಹಾರ ಉತ್ಪನ್ನದ ಮೋಯ್ಶ್ಚರ್ ಸೋರ್ಪ್ಷನ್ ಐಸೋಥರ್ಮ್ (moisture sorption isotherm) ಅನ್ನು ತಿಳಿಯಲು ಗುಗೆನ್ಹೀಮ್-ಆಂಡರ್ಸನ್-ಡಿಬೋರ್ (Guggenheim-Anderson-deBoer) ಸಮೀಕರಣದ ಆಧಾರದಲ್ಲಿರುವ ತೇವಾಂಶದ ಹರಿಯುವಿಕೆಯ ಸಮೀಕರಣದ ಸಂಖ್ಯಾತ್ಮಕ ಪರಿಹಾರವನ್ನು ಈ ಪ್ರೋಗ್ರಾಮ್ (program) ಒಳಗೊಂಡಿದೆ. ಅಸ್ಥಿರ ಶೇಖರಣಾ ಪರಿಸ್ಥಿತಿಗಳಲ್ಲಿ ತೇವಾಂಶದ ಬದಲಾವಣೆಗಳನ್ನು ಅಳೆಯುವಲ್ಲಿ, ಈ ಪ್ರೋಗ್ರಾಂ (program) ಪುನರಾವರ್ತನೆಯ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತದೆ, ಇದರಲ್ಲಿ ವ್ಯತ್ಯಾಸಗೊಳ್ಳುವ ಸ್ಥಿತಿಗಳನ್ನು ಸ್ಥಿರ ಸ್ಥಿತಿಗೆ ಅಳವಡಿಸಿಕೊಳ್ಳಲು ಸಣ್ಣ ಅವಧಿಯ ಪರಿಕಲ್ಪನೆಯಲ್ಲಿ ಅಂದಾಜು ಮಾಡಲಾಗುತ್ತದೆ.
ಈ ಸಾಫ್ಟ್ ವೇರ್ (software), ಗ್ರಾಫಿಕಲ್ ಯೂಸರ್ ಇಂಟರ್ಫೇಸ್ (Graphical User Interface), ಆಹಾರ ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್ (packaging) ಗಾಗಿ ಡೇಟಾಬೇಸ್ (database) ಕಾರ್ಯಾಚರಣೆಗಳು ಮತ್ತು ಹಲವಾರು ಇತರ ಯುಟಿಲಿಟಿ (utility) ಗಳನ್ನು ಒಳಗೊಂಡಿದೆ. ಈ ಸಾಫ್ಟ್ ವೇರ್ (software) ಬಳಸಿ, (i) ಆಹಾರ ಉತ್ಪನ್ನದಲ್ಲಿನ ತೇವಾಂಶ ಬದಲಾವಣೆಗಳು, (ii) ಆಹಾರ ಉತ್ಪನ್ನದ ಶೆಲ್ಫ್ (shelf) ಲೈಫ್ (life) (iii) ನಿಗದಿತ ಮತ್ತು ನಿರ್ದಿಷ್ಟ ಶೇಖರಣಾ ಪರಿಸ್ಥಿತಿಗಳಲ್ಲಿ ಆಹಾರ ಉತ್ಪನ್ನವನ್ನು ಸಂಗ್ರಹಿಸಲು ಪ್ಯಾಕೇಜ್ (package) ನ ತೇವಾಂಶ ಮುಂತಾದುವುಗಳನ್ನು ಅಂದಾಜಿಸಬಹುದು. ವಿವಿಧ ತೇವಾಂಶ-ಸೂಕ್ಷ್ಮವಾದ ಆಹಾರ ಉತ್ಪನ್ನಗಳನ್ನು ಒಳಗೊಂಡ ಅನೇಕ ಆಂತರಿಕ ಆರ್&ಡಿ (R&D) ಯೋಜನೆಗಳಲ್ಲಿ ಎಂಪ್ಯಾಕ್ (mPACK) ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ವಿಶಿಷ್ಟ ಸಾಫ್ಟ್ ವೇರ್ (software), ವಿಶ್ವದಲ್ಲೇ ಮೊದಲನೆಯದಾಗಿದೆ ಮತ್ತು ಕೈಗಾರಿಕೆಗಳಲ್ಲಿ ಹೊಸ ಉತ್ಪನ್ನ ತಯಾರಿಸುವಾಗ ಸಲಹೆ ನೀಡಲು ಉಪಯೋಗಿಸಲಾಗುತ್ತಿದೆ.
ಗೋಧಿಹುಗ್ಗಿ ಉತ್ತರ ಕರ್ನಾಟಕದ ಗೋಧಿ ಆಧಾರಿತ ಖಾದ್ಯಗಳಲ್ಲಿ ಒಂದಾಗಿದೆ. ಇದರ ಶೆಲ್ಫ್-ಲೈಫ್ (Shelf-Life) ಸಮಸ್ಯೆ ತಯಾರಕರು ಮತ್ತು ಗ್ರಾಹಕರು ಎದುರಿಸುತ್ತಿರುವ ಪ್ರಮುಖ ಅಡಚಣೆಗಳಲ್ಲಿ ಒಂದು. ಸಂಸ್ಥೆಯು ಈಗ ಅಭಿವೃದ್ಧಿಪಡಿಸಿದ ಸಂಸ್ಕರಣಾ ವಿಧಾನಗಳು ಈ ಉತ್ಪನ್ನದ ಶೆಲ್ಫ್-ಲೈಫ್ (Shelf-Life) ಅನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಈ ತಂತ್ರಜ್ಞಾನವನ್ನು ಇತ್ತೀಚೆಗೆ ಆಹಾರೋದ್ಯಮಿಯೊಬ್ಬರಿಗೆ ವರ್ಗಾಯಿಸಲಾಗಿದೆ.
ಇಂದಿನ ಸನ್ನಿವೇಶದಲ್ಲಿ, ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರು ಉತ್ತಮ ಆರೋಗ್ಯಕ್ಕಾಗಿ ಕಡಿಮೆ ಕೊಬ್ಬಿನ ಅಂಶವುಳ್ಳ ತಿಂಡಿಗಳನ್ನು ಬಯಸುತ್ತಾರೆ. ಸಾಮಾನ್ಯವಾಗಿ, ಸಾಂಪ್ರದಾಯಿಕ ತಂತ್ರವನ್ನು ಬಳಸಿ ಹುರಿಯುವ ತಿಂಡಿಗಳು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಹೊಂದಿರುತ್ತವೆ. ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಕಡಿಮೆ ಕೊಬ್ಬಿನೊಂದಿಗೆ ಉತ್ಪನ್ನವನ್ನು ಉತ್ಪಾದಿಸುವ ಪರ್ಯಾಯ ತಂತ್ರವು ಗ್ರಾಹಕರ ಆದ್ಯತೆಯಾಗಿದೆ. ನಿರ್ವಾತ ಹುರಿಯುವಿಕೆಯು ಸಾಂಪ್ರದಾಯಿಕ ಹುರಿಯುವಿಕೆಯಲ್ಲಿರುವ ಕೆಲವು ಮಿತಿಗಳನ್ನು ನಿವಾರಿಸಿ ಒಂದು ಭರವಸೆಯ ಪರ್ಯಾಯ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ನಿರ್ವಾತ ಹುರಿಯುವಿಕೆಯನ್ನು ಕಡಿಮೆ ತಾಪಮಾನದಲ್ಲಿ ಮತ್ತು ವಾತಾವರಣದ ಒತ್ತಡಕ್ಕಿಂತ ಕಡಿಮೆ ಒತ್ತಡದಲ್ಲಿ ನಡೆಸಲಾಗುತ್ತದೆ. ಒತ್ತಡದಲ್ಲಿನ ಕಡಿತವು, ನೀರಿನ ಕುದಿಯುವ ಬಿಂದುವನ್ನು / ಎಣ್ಣೆಯ ಹುರಿಯುವ ಬಿಂದುವನ್ನು ಕಡಿಮೆ ಮಾಡಿ, ಉತ್ಪನ್ನಗಳು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುವುದು, ಉತ್ಪನ್ನಗಳ ಸಹಜ ಬಣ್ಣ ಮತ್ತು ಪೋಷಕಾಂಶಗಳನ್ನು ಉಳಿಸಿಕೊಳ್ಳುವುದು, ಕಡಿಮೆ ಅಕ್ರಿಲಾಮೈಡ್ (acrylamide) ಉತ್ಪಾದನೆ ಮುಂತಾದ ಲಾಭಗಳು ಈ ತಂತ್ರಜ್ಞಾನದಿಂದ ದೊರಕಲಿದೆ. ನಿರ್ವಾತ ಹುರಿಯುವಿಕೆಯ ದಕ್ಷ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಇದರ ಆಧಾರದ ಮೇಲೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಈ ಸಂಸ್ಥೆಯು ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ.
ಹಣ್ಣಿನ ರಸದ ಪಾನೀಯಗಳನ್ನು ವಿವಿಧ ರೀತಿಯ ಹಣ್ಣುಗಳಿಂದ ತಯಾರಿಸಲಾಗುತ್ತದೆ ಮತ್ತು ಇವುಗಳನ್ನು ಪೌಷ್ಠಿಕಾಂಶದ ಪ್ರಯೋಜನಕ್ಕಾಗಿ ಸೇವಿಸಲಾಗುತ್ತದೆ. ಕಾರ್ಬೊನೇಟೆಡ್ (carbonated) ಪಾನೀಯಗಳು, ಅಜೈವಿಕ ಆಮ್ಲವನ್ನು ಅಂದರೆ, ಫಾಸ್ಪರಿಕ್ (Phosphoric) ಆಮ್ಲ, ಸಂಶ್ಲೇಷಿತ ಸಿಹಿಕಾರಕಗಳು ಮತ್ತು ಎಮಲ್ಸಿಫೈಯಿಂಗ್ ಏಜೆಂಟ್ (emulsifying agent) ಮತ್ತು ಇತರ ಸೇರ್ಪಡೆಗಳನ್ನು ಒಳಗೊಂಡಿರುತ್ತವೆ. ಇದರಿಂದ ಅವುಗಳ ಪೌಷ್ಠಿಕಾಂಶದ ಗುಣಮಟ್ಟವು ಕಳಪೆಯಾಗುತ್ತವೆ ಮತ್ತು ದೇಹದಲ್ಲಿನ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ ಎಂದು ವರದಿಯಾಗಿದೆ. ಹಣ್ಣಿನ ರಸದ ಪಾನೀಯಗಳ ಕಾರ್ಬೊನೇಷನ್ (carbonation) ಗೆ ಉತ್ತಮ ಅವಕಾಶವಿದೆ, ಇದು ಮುಖ್ಯವಾಗಿ ನೈಸರ್ಗಿಕ ಹಣ್ಣಿನ ರಸದಲ್ಲಿರುವ ಪೌಷ್ಠಿಕಾಂಶ ಮತ್ತು ಸಂವೇದನಾ ಗುಣಮಟ್ಟವನ್ನು ಸುಧಾರಿಸುತ್ತದೆ. ಕಾರ್ಬೊನೇಟೆಡ್ (carbonated) ಹಣ್ಣಿನ ಪಾನೀಯಗಳನ್ನು ಮತ್ತು ತಾಜಾ ಕಬ್ಬಿನ ರಸವನ್ನು ಬಾಟ್ಲಿಂಗ್ (Bottling) ಮಾಡಲು ಸಂಪೂರ್ಣ ಸ್ವಯಂಚಾಲಿತ, ಸಂಯೋಜಿತ ಪ್ಲಾಂಟ್ (plant) ಅನ್ನು ಸಂಸ್ಥೆಯು ಸ್ಥಾಪಿಸಿದೆ. ಪ್ಲಾಂಟ್ (plant) ಮುಖ್ಯವಾಗಿ ಚಿಲ್ಲಿಂಗ್ (Chilling) ಮತ್ತು ಕಾರ್ಬೊನೇಷನ್ (Carbonation) ವಿಭಾಗಗಳು, ಬಾಟ್ಲಿಂಗ್ (Bottling) ವಿಭಾಗಗಳು ಮತ್ತು ಶ್ರೀನ್ಕ್ ವ್ರಾಪ್ (shrink wrap) ವಿಭಾಗವನ್ನು ಒಳಗೊಂಡಿರುತ್ತದೆ.
ನಿರ್ಜಲೀಕರಣ ಅಥವಾ ಒಣಗಿಸುವಿಕೆ, ಸಂರಕ್ಷಣಾ ತಂತ್ರಗಳಲ್ಲಿ ಒಂದು ಪ್ರಕ್ರಿಯೆಯಾಗಿದ್ದು, ಇದು ವಸ್ತುವಿನ ತೇವಾಂಶವನ್ನು ಸೂಕ್ಷ್ಮಜೀವಿಯ ಚಟುವಟಿಕೆಯನ್ನು ಹಿಮ್ಮೆಟ್ಟಿಸುವ ಮಟ್ಟಕ್ಕೆ ತರುತ್ತದೆ. ತೇವಾಂಶದಲ್ಲಿನ ಕಡಿತವು ವಸ್ತುವಿನ ಶೆಲ್ಫ್(shelf) ಲೈಫ್ (life) ಅನ್ನು ಹೆಚ್ಚಿಸುತ್ತದೆ, ತೂಕ ಮತ್ತು ಪರಿಮಾಣವನ್ನು ಕಡಿಮೆ ಮಾಡುತ್ತದೆ, ಮತ್ತು ಪ್ಯಾಕಿಂಗ್ (packing), ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಣೆಯನ್ನು ಸುಲಭವಾಗಿಸುತ್ತದೆ. ಆದಾಗ್ಯೂ, ನಿರ್ಜಲೀಕರಣದ ನ್ಯೂನತೆಗಳು ಯಾವುವೆಂದರೆ ಹೆಚ್ಚಿನ ಘಟಕ ಸಂಸ್ಕರಣಾ ವೆಚ್ಚ, ವಿಶೇಷವಾಗಿ ಫ್ರೀಜ್- ಡ್ರೈಡ್ (freeze-dried) ತಂತ್ರಜ್ಞಾನದಿಂದ ಒಣಗಿಸಿದ ಉತ್ಪನ್ನಗಳಿಗೆ ಕೆಲವೊಮ್ಮೆ ಕಳಪೆ ಗುಣಮಟ್ಟದ ರಚನೆ ಮತ್ತು ಪರಿಮಳವನ್ನು ನೀಡುತ್ತದೆ. ಆಧುನಿಕ ತಂತ್ರಜ್ಞಾನಗಳು ಫೀಲ್ಡ್ (field) ಅಸ್ಸಿಸ್ಟಡ್ (assisted) ಒಣಗಿಸುವ ವಿಧಾನಗಳನ್ನು ಒಳಗೊಂಡಿದೆ. ಇದರಲ್ಲಿ ಡೈಎಲೆಕ್ಟ್ರಿಕ್ (Dielectric) ಹೀಟಿಂಗ್ (heating) [ರೇಡಿಯೊಫ್ರೀಕ್ವೆನ್ಸಿ (Radiofrequency) ಮತ್ತು ಮೈಕ್ರೊವೇವ್ (Microwave)], ವಿದ್ಯುತ್ಕಾಂತೀಯ ತಾಪನ ಸೇರಿದಂತೆ ವಿವಿಧ ವಿಧಾನಗಳು ಸೇರಿವೆ. ವಿವಿಧ ಆಹಾರ ಉತ್ಪನ್ನಗಳ ವಿದ್ಯುತ್ಕಾಂತೀಯ ವಿಕಿರಣ ಆಧಾರಿತ ಒಣಗಿಸುವಿಕೆಗಾಗಿ ಯಂತ್ರೋಪಕರಣಗಳು ಮತ್ತು ಪ್ರಕ್ರಿಯೆಗಳ ಅಭಿವೃದ್ಧಿಯ ಕ್ಷೇತ್ರದಲ್ಲಿ ಈ ಸಂಸ್ಥೆಯು ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ.