logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಸಂಶೋಧನಾ ಕ್ಷೇತ್ರಗಳು

ಲಿಪಿಡೋಮಿಕ್ ಕೇಂದ್ರ

ಸಿಎಸ್ಐಆರ್ ನಿಂದ XII ಪಂಚವಾರ್ಷಿಕ ಯೋಜನೆಗಳ ಭಾಗವಾಗಿ, ಸಿಎಸ್ಐಆರ್- ಸಿಎಫ್‌ಟಿಆರ್‌ಐ, ಲಿಪಿಡ್ (lipid) ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ವಿಭಾಗವನ್ನು ಸ್ಥಾಪಿಸಲು 20 ಕೋಟಿ ರೂಪಾಯಿಗಿಂತ ಹೆಚ್ಚಿನ ಅನುದಾನವನ್ನು ಪಡೆಯಿತು. ಈ ಕೇಂದ್ರವನ್ನು 2016 ರಲ್ಲಿ ಯಶಸ್ವಿಯಾಗಿ ಸ್ಥಾಪಿಸಲಾಯಿತು. ಉನ್ನತ ಮಟ್ಟದ ಲಿಪಿಡ್ (lipid) ಸಂಶೋಧನೆಗೆ ಅಗತ್ಯವಾದ ಅತ್ಯುತ್ತಮ ಸಾಧನಗಳನ್ನು ಈ ಕೇಂದ್ರವು ಹೊಂದಿದೆ. ಲಿಪಿಡ್‌ (lipid) ಗಳಲ್ಲಿ ಸಾಮಾನ್ಯವಾಗಿ ತಿಳಿದಿರುವ ತೈಲಗಳು ಮತ್ತು ಕೊಬ್ಬುಗಳು ಸೇರಿವೆ. ಅಷ್ಟು ಚೆನ್ನಾಗಿ ಅಧ್ಯಯನ ಮಾಡದ ಈ ಆಹಾರ ಅಣುವಿನ ಮೇಲೆ ಈ ಕೇಂದ್ರವು ಸಂಶೋಧನೆಯನ್ನು ಮಾಡುತ್ತಿದೆ. ಯೀಸ್ಟ್ (yeast) ಕೋಶಗಳು ಮತ್ತು ಸಸ್ಯ ಕೋಶಗಳೊಳಗಿನ ಲಿಪಿಡ್ (lipid) ಚಯಾಪಚಯ ಕ್ರಿಯೆಯ ಪ್ರತಿಲೇಖನ ನಿಯಂತ್ರಣವನ್ನು ಅರ್ಥೈಸಿಕೊಳ್ಳುವುದರಿಂದ ಹಿಡಿದು, ಹೊಸ ಎಣ್ಣೆಬೀಜದ ಬೆಳೆಗಳನ್ನು ಗುರುತಿಸುವುದು, ನಿರೂಪಿಸುವುದು ಮತ್ತು ಅಳವಡಿಸಿಕೊಳ್ಳುವುದು, ಮತ್ತು ತೈಲಗಳ ಬಗ್ಗೆ ಈ ಕೇಂದ್ರವು ವ್ಯಾಪಕವಾದ ಸಂಶೋಧನೆ ಮಾಡುತ್ತಿದೆ.
ತೈಲಗಳು ಮತ್ತು ಕೊಬ್ಬುಗಳನ್ನು ನೋಡುವ ವಿಧಾನವನ್ನು ಬದಲಾಯಿಸುವುದು ಈ ಕೇಂದ್ರದ ದೃಷ್ಟಿ ಮತ್ತು ಉದ್ದೇಶವಾಗಿದೆ. ತ್ವರಿತ ಆಹಾರ ಕ್ರಮವುಳ್ಳ ಅತಿ ಉತ್ಸಾಹಿತ ಈ ಜಗತ್ತಿನಲ್ಲಿ, ಕೊಬ್ಬಿನಾಂಶದ ಮೇಲಿರುವ ಋಣಾತ್ಮಕ ಅರ್ಥವನ್ನು ತೆಗೆದುಹಾಕಲು ಈ ಕೇಂದ್ರವು ಶ್ರಮಿಸುತ್ತದೆ ಮತ್ತು ಕೆಲವು ಆರೋಗ್ಯಕರ ತೈಲ ಮಿಶ್ರಣಗಳನ್ನು ಹೊಂದುವತ್ತ ಕೆಲಸ ಮಾಡುತ್ತಿದೆ. ಈ ಕೇಂದ್ರವು ವಿಶೇಷ ತೈಲಗಳು, ಒಮೆಗಾ (omega) 3 ಕೊಬ್ಬಿನಾಮ್ಲ ಸಮೃದ್ಧ ತೈಲಗಳು, ಆರೋಗ್ಯಕರವಾದ ಎಲೆಯ ಎಣ್ಣೆಗಳು ಮತ್ತು ಎಣ್ಣೆ ಕ್ಯಾಪ್ಸುಲ್‌ (capsule) ಗಳನ್ನು ನ್ಯೂಟ್ರಾಸ್ಯುಟಿಕಲ್‌ (nutraceutical) ಗಳಾಗಿ ಅಭಿವೃದ್ಧಿಪಡಿಸುತ್ತಿದೆ.
ಲಿಪಿಡ್ (lipid) ಚಯಾಪಚಯ ಕ್ರಿಯೆಯಲ್ಲಿ ತೊಡಗಿರುವ ವಿವಿಧ ಯೀಸ್ಟ್ (yeast) ಮತ್ತು ಸಸ್ಯ ಅನುವಂಶಿಕ ಧಾತುಗಳ ಮೇಲೆ ಮೂಲಭೂತ ಸಂಶೋಧನೆಯು ಹೊಸ ಅನುವಂಶಿಕ ಧಾತುಗಳು ಮತ್ತು / ಕಾರ್ಯಗಳ ಗುರುತಿಸುವಿಕೆ ಮತ್ತು ಗುಣಲಕ್ಷಣಗಳಿಗೆ ಕಾರಣವಾಗಿದೆ. ಇವುಗಳು ಹಲವಾರು ಸಂಶೋಧನಾ ಲೇಖನಗಳಿಗೆ ಕಾರಣವಾಗಿದ್ದು, ಈ ಕೇಂದ್ರದಲ್ಲಿ ನಡೆಯುವ ಸಂಶೋಧನೆಯ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿರಿಸುತ್ತದೆ.
ಈ ಕೇಂದ್ರವು ಹೊಂದಿರುವ ಉಪಕರಣಗಳು ದೇಶದಲ್ಲೇ ವಿನೂತನವಾದದ್ದು. ಇದನ್ನು ವಿಶ್ವದ ಅತ್ಯುತ್ತಮ ಲಿಪಿಡ್ (lipid) ಸಂಶೋಧನಾ ಪ್ರಯೋಗಾಲಯಗಳಿಗೆ ಹೋಲಿಸಬಹುದು. ಈ ಕೇಂದ್ರದಲ್ಲಿ ಯೀಸ್ಟ್ (yeast) ಮತ್ತು ಸಸ್ಯ ಲಿಪಿಡೋಮಿಕ್ಶೇವ್ (lipidomicshave) ಬಗ್ಗೆ ಸಂಶೋಧನೆಗಳನ್ನು ಭಾರತದಲ್ಲಿ ಮೊದಲ ಬಾರಿಗೆ ವ್ಯಾಪಕವಾಗಿ ನಡೆಸಲಾಗಿದ್ದು, ಇದು ದೇಶದ ಅತ್ಯುತ್ತಮ ಲಿಪಿಡ್ (lipid) ಸಂಶೋಧನಾ ಕೇಂದ್ರವಾಗಿದೆ.