logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಶೈಕ್ಷಣಿಕ ಕಾರ್ಯಕ್ರಮಗಳು

ಎಂ.ಎಸ್ಸಿ. ಆಹಾರ ತಂತ್ರಜ್ಞಾನ

ಎಂ.ಎಸ್ಸಿ. ಆಹಾರ ತಂತ್ರಜ್ಞಾನದ ಕೋರ್ಸನ್ನು, ಅಂತರರಾಷ್ಟ್ರೀಯ ಆಹಾರ ತಂತ್ರಜ್ಞಾನ ತರಬೇತಿ ಕೇಂದ್ರ ಐಎಫ್‌ಟಿಟಿಸಿ (IFTTC) ದ ಅಂಗವಾಗಿ, 1964 ರಲ್ಲಿ ಪ್ರಾರಂಭಿಸಲಾಯಿತು. ಅರ್ಹತಾ ಪ್ರವೇಶ ಪರೀಕ್ಷಾ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಪ್ರವೇಶವನ್ನು ಪಡೆಯಬಹುದು. ಈ ಕೋರ್ಸ್ ನ ಒಂದು ಸೀಟನ್ನು ಭಾರತೀಯ ಸೇನೆಯಿಂದ ಬರುವವರಿಗೆ ಮೀಸಲಿಡಲಾಗಿದೆ. ಎಂ.ಎಸ್ಸಿ. ಆಹಾರ ತಂತ್ರಜ್ಞಾನವು ಅಂತರ್-ಶಿಕ್ಷಣದ ಕೋರ್ಸ್ ಆಗಿದೆ, ಇದು ಹೆಚ್ಚು ತರಬೇತಿ ಪಡೆದ ಆಹಾರ ತಂತ್ರಜ್ಞರೊಂದಿಗೆ ಆಹಾರ ಉದ್ಯಮಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಹ್ಯಾಂಡ್ಸ್-ಆನ್ (Hands-on) ಅನುಭವದೊಂದಿಗೆ ಸಂಯೋಜಿಸಲ್ಪಟ್ಟ ವ್ಯಾಪಕವಾದ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಸಮಕಾಲೀನ ಸವಾಲುಗಳನ್ನು ಎದುರಿಸಲು ಮತ್ತು ಆಹಾರ ಕ್ಷೇತ್ರದಲ್ಲಿ ಭವಿಷ್ಯದ ತುರ್ತು ಪರಿಸ್ಥಿತಿಗಳಿಗೆ ಉತ್ತರಿಸಲು ಸಜ್ಜುಗೊಳಿಸುತ್ತದೆ. ಕೋರ್ಸ್‌ಗೆ ಅಭ್ಯರ್ಥಿಗಳ ಆಯ್ಕೆಯು, ಅರ್ಹತಾ ಪದವಿ ಪರೀಕ್ಷೆಯಲ್ಲಿ ಅವರ ಸಾಧನೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿದೆ. ಮೈಸೂರಿನಲ್ಲಿ ನಡೆಸುವ ರಾಷ್ಟ್ರೀಯ ಮಟ್ಟದ ಆಬ್ಜೆಕ್ಟಿವ್ ಟೈಪ್ (Objective Type) ನ ಪ್ರವೇಶ ಪರೀಕ್ಷೆಯ ಮೂಲಕ ಈ ಕೋರ್ಸ್‌ಗೆ ಜುಲೈ ತಿಂಗಳಲ್ಲಿ ಪ್ರವೇಶವನ್ನು ನೀಡಲಾಗುತ್ತದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಕ್ಯಾಂಪಸ್ (campus) ಆಯ್ಕೆಯ ಮೂಲಕ ಆಹಾರ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ, ಸಂಸ್ಥೆಗಳಲ್ಲಿ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ಎಂ.ಎಸ್ಸಿ (ಆಹಾರ ತಂತ್ರಜ್ಞಾನ) ಪ್ರವೇಶ ಪರೀಕ್ಷೆಯ ಫಲಿತಾಂಶಗಳು, ಯಾವುದೇ ಮಾಹಿತಿಗಾಗಿ, ಎಚ್‌ಆರ್‌ಡಿ - 0821-2416028 ಅನ್ನು ಸಂಪರ್ಕಿಸಿ.


ಹಿಟ್ಟಿನ ಗಿರಣಿ ತಂತ್ರಜ್ಞಾನದ ಕೋರ್ಸ್

ಇಂಡೋ-ಸ್ವಿಸ್ (Indo-Swiss) ಉದ್ಯಮ ಮತ್ತು ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ (Roller Flour Millers Federation of India) ದ ಜಂಟಿ ಯೋಜನೆಯಾಗಿ ಹಿಟ್ಟಿನ ಗಿರಣಿ ತಂತ್ರಜ್ಞಾನದ ತರಬೇತಿಗೆ ಸಂಬಂಧಿಸಿದಂತೆ, ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಹಿಟ್ಟಿನ ಗಿರಣಿ ಉದ್ಯಮದ ಅಗತ್ಯತೆಗಳನ್ನು ಪೂರೈಸಲು 1981 ರಲ್ಲಿ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಮಿಲ್ಲಿಂಗ್ ಟೆಕ್ನಾಲಜಿ (ಐಎಸ್‌ಎಂಟಿ) ಯನ್ನು ಸ್ಥಾಪಿಸಲಾಯಿತು. ಸಂಪೂರ್ಣ ಗಣಕಯಂತ್ರ ನಿಯಂತ್ರಿತ ಪೈಲಟ್ (Pilot) ರೋಲರ್ (Roller) ಹಿಟ್ಟಿನ ಗಿರಣಿಯೊಂದಿಗೆ ಸಿಎಫ್‌ಟಿಆರ್‌ಐ ನ ಸೌಲಭ್ಯಗಳು ಮತ್ತು ಪರಿಣತರ ತಂಡವನ್ನು ಐಎಸ್‌ಎಂಟಿ (ISMT) ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮತ್ತು ಭಾರತೀಯ ಉಪಖಂಡದ ಮಾನದಂಡಗಳ ಪ್ರಕಾರ ಮಿಲ್ಲಿಂಗ್ (Milling) ತಂತ್ರಜ್ಞಾನವನ್ನು ಕಲಿಸಲಾಗುತ್ತದೆ. ಕಚ್ಚಾ ವಸ್ತುಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳ ಭೌತ-ರಾಸಾಯನಿಕ ಗುಣಲಕ್ಷಣಗಳನ್ನು ಪರೀಕ್ಷಿಸಲು ಐಎಸ್‌ಎಂಟಿ (ISMT) ಯು ವಿಶ್ಲೇಷಣಾತ್ಮಕ ಪ್ರಯೋಗಾಲಯವನ್ನು ಸಹ ಹೊಂದಿದೆ. ಇದಲ್ಲದೆ, ಮಿಲ್ಲಿಂಗ್ (Milling) ಉತ್ಪನ್ನಗಳ ಗುಣಮಟ್ಟವನ್ನು ನಿರ್ಣಯಿಸಲು ಟೆಸ್ಟ್ ಬೇಕಿಂಗ್ (Test Baking) ಮತ್ತು ಪೈಲಟ್ ಸ್ಕೇಲ್ ಬೇಕಿಂಗ್ (Pilot Scale Baking) ಸೌಲಭ್ಯಗಳು ಲಭ್ಯವಿವೆ.


ಪಿಎಚ್‌. ಡಿ ಕಾರ್ಯಕ್ರಮಗಳು

a) ಅಕಾಡೆಮಿ ಆಫ್ ಸೈಂಟಿಫಿಕ್ & ಇನ್ನೋವೇಟಿವ್ ರಿಸರ್ಚ್ (ಎಸಿಎಸ್ಐಆರ್)

ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆ, ಜ್ಞಾನ ಪ್ರಸಾರ, ತಂತ್ರಜ್ಞಾನ ವರ್ಗಾವಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಲು, ಸಿಎಸ್ಐಆರ್- ಸಿಎಫ್‌ಟಿಆರ್‌ಐ ತನ್ನ ಪ್ರಕ್ರಿಯೆಗಳ ಪ್ರತಿ ಹಂತದಲ್ಲೂ ಉನ್ನತ ಮಟ್ಟದ ಗುಣಲಕ್ಷಣಗಳನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ವೈವಿಧ್ಯಮಯ ವಿಭಾಗಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಗಮನವು ಅತ್ಯುತ್ತಮ ಮೂಲಸೌಕರ್ಯ, ಅತ್ಯಾಧುನಿಕ ಉಪಕರಣ ಮತ್ತು ಪೈಲಟ್ (pilot) ಪ್ಲಾಂಟ್ (plant) ಸೌಲಭ್ಯಗಳು ಮತ್ತು ಸುಧಾರಿತ ಸಂಶೋಧನಾ ತರಬೇತಿಗಳಿಂದ ಅತ್ಯುತ್ತಮವಾಗಿ ಬೆಂಬಲಿತವಾಗಿದೆ. ಸಿಎಸ್ಐಆರ್-ಸಿಎಫ್‌ಟಿಆರ್‌ಐ ಸಂಸ್ಥೆಯು, ಅಕಾಡೆಮಿ ಆಫ್ ಸೈಂಟಿಫಿಕ್ ಮತ್ತು ಇನ್ನೋವೇಟಿವ್ ರಿಸರ್ಚ್ (ಎಸಿಎಸ್ಐಆರ್) ಅಡಿಯಲ್ಲಿ ಜೈವಿಕ ವಿಜ್ಞಾನ / ಎಂಜಿನಿಯರಿಂಗ್ (Engineering) ವಿಜ್ಞಾನದಲ್ಲಿ ಪೂರ್ಣ ಸಮಯದ ಡಾಕ್ಟರಲ್ (Doctoral) (ಪಿಎಚ್‌. ಡಿ) ಸಂಶೋಧನೆಯನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಶೋಧನೆ ಮತ್ತು ನವೀನ ವಾತಾವರಣವನ್ನು ಸೃಷ್ಟಿಸುತ್ತದೆ.


b) ವಿಶ್ವವಿದ್ಯಾಲಯಗಳು

ಸಿಎಸ್ಐಆರ್- ಸಿಎಫ್‌ಟಿಆರ್‌ಐ ವಿಜ್ಞಾನ ವಿಭಾಗದಲ್ಲಿ ಪಿಎಚ್‌.ಡಿ (Ph.D) ಮಾಡಲು ಮೈಸೂರು ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಜೀವರಸಾಯನ ಶಾಸ್ತ್ರ, ಜೈವಿಕ ವಿಜ್ಞಾನ, ಬಯೋ ಟೆಕ್ನಾಲಜಿ, ರಸಾಯನಶಾಸ್ತ್ರ, ಆಹಾರ ವಿಜ್ಞಾನ, ಆಹಾರ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ಪೋಷಣೆ ಮತ್ತು ಸೂಕ್ಷ್ಮಜೀವಿ ವಿಜ್ಞಾನದಂತಹ ವಿಷಯಗಳಲ್ಲಿ ಪಿಎಚ್‌.ಡಿ ಪದವಿಗೆ ನೋಂದಣಿಯನ್ನು ಮಾಡಿಸಬಹುದು. ಹೆಚ್ಚಿನ ವಿವರಗಳಿಗಾಗಿ ಕೋ-ಆರ್ಡಿನೇಟರ್ (Co-ordinator), ಪಿಎಚ್‌.ಡಿ (ವಿಶ್ವವಿದ್ಯಾಲಯಗಳು) ಸಂಪರ್ಕಿಸಿ.