ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ಮೈಸೂರು (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಒಂದು ಘಟಕ ಪ್ರಯೋಗಾಲಯ, ನವದೆಹಲಿ), 1950 ರಲ್ಲಿ ಅದರ ಸಂಸ್ಥಾಪಕರ ದೂರದೃಷ್ಟಿ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುಂದುವರಿಸುವ ಆಕಾಂಕ್ಷೆಯನ್ನು ಹೊಂದಿರುವ, ಸ್ಪೂರ್ತಿದಾಯಕ ಮತ್ತು ಸಮರ್ಪಿತ ವಿಜ್ಞಾನಿಗಳ ಜಾಲದ ಸಹಯೋಗದೊಂದಿಗೆ ಅಸ್ತಿತ್ವಕ್ಕೆ ಬಂದಿರುತ್ತದೆ. Reಸಿಎಸ್ಐಆರ್ - ಸಿಎಫ್‌ಟಿಆರ್‌ಐ ನ ಸಂಶೋಧನೆಯು ಈ ಕೆಳಗಿನ ವಿಶಾಲವಾದ ಕ್ಷೇತ್ರಗಳಲ್ಲಿ ಕೇಂದ್ರೀಕೃತಗೊಂಡಿದೆ:
ಆಹಾರ ತಂತ್ರಜ್ಞಾನವು ಅಂತರ್-ಕ್ಷೇತ್ರದ ಸ್ವರೂಪದಲ್ಲಿರುವುದರಿಂದ, ಈ ಸಂಸ್ಥೆಯ ಉದ್ದೇಶ ಅಥವಾ ದೃಷ್ಟಿಕೋನವು ವಿವಿಧ ಆರ್ & ಡಿ ಇಲಾಖೆಗಳು ಮತ್ತು ಬೆಂಬಲ ಇಲಾಖೆಗಳ ಮೂಲಕ ಮತ್ತು ಹೈದರಾಬಾದ್, ಲಕ್ನೋ ಮತ್ತು ಮುಂಬೈನಲ್ಲಿರುವ ಸಂಪನ್ಮೂಲ ಕೇಂದ್ರಗಳ ಮೂಲಕ ಪೂರೈಸಲ್ಪಡುತ್ತದೆ.
ಆರ್ & ಡಿ ಇಲಾಖೆಗಳು
ಜೀವರಸಾಯನ ಶಾಸ್ತ್ರ ವಿಭಾಗ | ಲಿಪಿಡ್ ಸೈನ್ಸ್ (Lipid Science) |
ಹಿಟ್ಟಿನ ಗಿರಣಿ, ಬೇಕಿಂಗ್ (baking) ಮತ್ತು ಮಿಠಾಯಿ ತಂತ್ರಜ್ಞಾನ | ಮಾಂಸ ಮತ್ತು ಸಮುದ್ರೀಯ ವಿಜ್ಞಾನ |
ಆಹಾರ ಎಂಜಿನಿಯರಿಂಗ್ (Engineering) | ಸೂಕ್ಷ್ಮಜೀವಿ ವಿಜ್ಞಾನ ಮತ್ತು ಕಿಣ್ವನ ತಂತ್ರಜ್ಞಾನ |
ಆಹಾರ ಪ್ಯಾಕೇಜಿಂಗ್ (Packaging) ತಂತ್ರಜ್ಞಾನ | ಆಣ್ವಿಕ ಪೋಷಣೆ |
ಆಹಾರ ಸಂರಕ್ಷಣಾ ವಿಭಾಗ | ಸಸ್ಯ ಕೋಶ ಜೈವಿಕ ತಂತ್ರಜ್ಞಾನ |
ಆಹಾರ ಸುರಕ್ಷತೆ ಮತ್ತು ವಿಶ್ಲೇಷಣಾ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು | ಪ್ರೋಟೀನು ರಸಾಯನಶಾಸ್ತ್ರ ಮತ್ತು ತಂತ್ರಜ್ಞಾನ |
ಹಣ್ಣು ಮತ್ತು ತರಕಾರಿ ತಂತ್ರಜ್ಞಾನ | ಮಸಾಲೆ ಪದಾರ್ಥಗಳು ಮತ್ತು ಪರಿಮಳ ವಿಜ್ಞಾನ |
ಧಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ | ಸಾಂಪ್ರದಾಯಿಕ ಆಹಾರ ಮತ್ತು ಐಂದ್ರಿಯ ವಿಜ್ಞಾನ |
ಬೆಂಬಲ ಇಲಾಖೆಗಳು
ಐಟಿ (IT) ಸೇವೆಗಳು ಮತ್ತು ಗಣಕೀಯ ಪರಿಹಾರಗಳು | ಮಾಹಿತಿ ಮತ್ತು ಪ್ರಚಾರ |
ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆ | ಯೋಜನೆ, ಮಾನಿಟರಿಂಗ್ (Monitoring) ಮತ್ತು ಸಮನ್ವಯ |
ಎಂಜಿನಿಯರಿಂಗ್ (Engineering) ಮತ್ತು ಯಾಂತ್ರಿಕ ನಿರ್ವಹಣೆ | ತಂತ್ರಜ್ಞಾನ ವರ್ಗಾವಣೆ ಮತ್ತು ವ್ಯಾಪಾರ ಅಭಿವೃದ್ಧಿ |
ಸೌಲಭ್ಯಗಳು
ಪ್ರಯೋಗಾತ್ಮಕ ಪ್ರಾಣಿ ಗೃಹ | ಆರೋಗ್ಯ ಕೇಂದ್ರ |
ಕೇಂದ್ರೀಯ ಉಪಕರಣ ಸೌಲಭ್ಯ ಮತ್ತು ಸೇವೆಗಳು | ಗ್ರಂಥಾಲಯ |
ಸಂಪನ್ಮೂಲ ಕೇಂದ್ರಗಳು
ಹೈದರಾಬಾದ್ | ಮುಂಬೈ | ಲಕ್ನೌ |