logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಕೌಶಲ್ಯ ಅಭಿವೃದ್ಧಿ

ಈ ಸಂಸ್ಥೆಯು ಪ್ರತಿವರ್ಷ ಸುಮಾರು 30-35 ನಿಯಮಿತ ತರಬೇತಿ ಕಾರ್ಯಕ್ರಮಗಳು ಹಾಗು ಕಸ್ಟಮ್ ಮೇಡ್(custom made) ತರಬೇತಿಯನ್ನು ನಡೆಸುತ್ತದೆ. ಇದು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕೋರ್ಸ್‌ಗಳು ಅಲ್ಪಾವಧಿಯದ್ದಾಗಿರುತ್ತವೆ ಹಾಗು ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳಿಂದ ತುಂಬಿರುತ್ತವೆ. ಈ ಕೋರ್ಸ್‌ಗಳನ್ನು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ನಿರ್ವಹಿಸುತ್ತಾರೆ. ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ತರಗತಿಗಳನ್ನು, ಸಿಎಸ್ಐಆರ್- ಸಿಎಫ್‌ಟಿಆರ್‌ಐ ನಲ್ಲಿರುವ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಮತ್ತು ಪೈಲಟ್ ಪ್ಲಾಂಟ್ಸ್ (pilot plants) ನಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ಕೋರ್ಸ್‌ನ ಕೊನೆಯಲ್ಲಿ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

ಈ ಅಲ್ಪಾವಧಿಯ, ಘನೀಕರಿಸಿದ, ಕೇಂದ್ರೀಕೃತ ಮತ್ತು ಕ್ಯಾಪ್ಸುಲೇಟೆಡ್ (capsulated) ಪಠ್ಯಕ್ರಮದ ಕಾರಣದಿಂದಾಗಿ, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಉದ್ಯೋಗಿಗಳು ಮತ್ತು ಹೆಚ್ಚಿನ ಸಮಯ ಸಿಗದ ಉದ್ಯಮಿಗಳು 3 ದಿನ ಮತ್ತು 5 ದಿನಗಳ ಕೋರ್ಸ್‌ಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ.