logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಸಂಶೋಧನಾ ಕ್ಷೇತ್ರಗಳು

ಆಹಾರ ಸಂರಕ್ಷಕಗಳು

ಭಾರತೀಯ ಕೃಷಿ-ಆಹಾರ ಕ್ಷೇತ್ರವು ಅಗತ್ಯ ಆಹಾರ ಪದಾರ್ಥಗಳ ಉತ್ಪಾದನೆಯನ್ನು ಹೆಚ್ಚಿಸಿದ್ದರೂ, ಸುಗ್ಗಿಯ ನಂತರದ ಕಾರ್ಯಾಚರಣೆಗಳ ಸರಪಳಿಯಲ್ಲಿ ನಷ್ಟಗಳು ಸಂಭವಿಸುತ್ತವೆ. ಈ ನಷ್ಟಗಳು ಆಹಾರ ಸರಕುಗಳಲ್ಲಿ ಸಂಭವಿಸುವ ವೇಗವರ್ಧಿತ ಶಾರೀರಿಕ, ರಾಸಾಯನಿಕ ಮತ್ತು ಸೂಕ್ಷ್ಮ ಜೀವವಿಜ್ಞಾನದ ಪ್ರಕ್ರಿಯೆಗಳ ಪರಿಣಾಮವಾಗಿದೆ.
ಸಂಗ್ರಹಿಸಿದ ಆಹಾರ ಧಾನ್ಯಗಳು, ಮಸಾಲೆ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಕೀಟ ಮತ್ತು ಕೀಟಭಾದೆಯ ನಿಯಂತ್ರಣಕ್ಕೆ ಸಂಬಂಧಿಸಿದ, ಸುಗ್ಗಿಯ ನಂತರದ ರಕ್ಷಣಾತ್ಮಕ ಕ್ರಮಗಳ ಕ್ಷೇತ್ರಗಳಲ್ಲಿ ಆಹಾರ ಸಂರಕ್ಷಣೆ ಮತ್ತು ಕೀಟ ನಿಯಂತ್ರಣದ ವಿಭಾಗವು ಸಂಶೋಧನೆಯನ್ನು ಮಾಡುತ್ತಿದೆ. ಆಹಾರ ಸಂರಕ್ಷಣೆ ಮತ್ತು ಕೀಟ ನಿಯಂತ್ರಣದ ಬಲವು ಧೂಪನಕ್ರಿಯೆ, ಸಂಗ್ರಹಿಸಿದ ಉತ್ಪನ್ನದ ಕೀಟಶಾಸ್ತ್ರ, ಕೀಟನಾಶಕ ರಸಾಯನಶಾಸ್ತ್ರ, ಜೈವಿಕ ಕೀಟನಾಶಕಗಳು, ಸೂಕ್ಷ್ಮಜೀವಿಯ ಬಯೋರೆಮಿಡಿಯೇಶನ್ (bioremediation) ಮತ್ತು ಕೀಟನಾಶಕ ವಿಷಶಾಸ್ತ್ರದ ಕ್ಷೇತ್ರಗಳ ತಜ್ಞರೊಂದಿಗೆ ಮಲ್ಟಿಡಿಸಿಪ್ಲಿನರಿ (multidisciplinary) ವಿಧಾನದಲ್ಲಿದೆ.
ಸಂಗ್ರಹಿಸಿದ ಆಹಾರ ಉತ್ಪನ್ನಗಳನ್ನು ಶೇಖರಣಾ ಕೀಟಗಳಿಂದ ರಕ್ಷಿಸುವುದು ಆಹಾರ ಭದ್ರತೆ ಮತ್ತು ಆಹಾರ ಸುರಕ್ಷತೆಗೆ ಒಂದು ಆಧಾರವಾಗಿದೆ. ಸಾಂಪ್ರದಾಯಿಕ ಫ್ಯೂಮಿಗಂಟ್ (fumigant) ಮತ್ತು ಕೀಟನಾಶಕಗಳಿಗೆ ಕೀಟಗಳ ಪ್ರತಿರೋಧವು ವೈಫಲ್ಯಗಳನ್ನು ನಿಯಂತ್ರಿಸಲು ಪ್ರಮುಖ ಅಪಾಯವಾಗಿದೆ. ಅಸ್ತಿತ್ವದಲ್ಲಿರುವ ಪ್ರತಿರೋಧವನ್ನು ಎದುರಿಸಲು ಮತ್ತು ಆ ಮೂಲಕ ಆಹಾರ ಸರಕುಗಳ ಕೀಟ ಮುಕ್ತ ಸಂಗ್ರಹವನ್ನು ಸಾಧಿಸಲು ಪರ್ಯಾಯ ತಂತ್ರಗಳು ಅಗತ್ಯ.
ಮೇಲಿನ ದೃಷ್ಟಿಯಿಂದ, ಸಾಂಪ್ರದಾಯಿಕ ಫ್ಯೂಮಿಗಂಟ್ (fumigant) ಗಳ ವಿರುದ್ಧ ಕೀಟಗಳ ಪ್ರತಿರೋಧವನ್ನು ನಿರ್ವಹಿಸಲು, ಹೊಸ ಫ್ಯೂಮಿಗಂಟ್ (fumigant) ಗಳ ಪರಿಣಾಮಕಾರಿತ್ವವನ್ನು ಹುಡುಕಲು ಮತ್ತು ತನಿಖೆ ಮಾಡಲು, ಫ್ಯೂಮಿಗಂಟ್ (fumigant) ಶೇಷಮುಕ್ತ ಆಹಾರ ಧಾನ್ಯಗಳ ಶೇಖರಣೆಗಾಗಿ ಮಾರ್ಪಡಿಸಿದ ಅಥವಾ ನಿಯಂತ್ರಿತ ವಾತಾವರಣದ ಚಿಕಿತ್ಸೆಗಳ ಮಹತ್ವವನ್ನು ಅಧ್ಯಯನ ಮಾಡಲು, ಸಿಎಫ್‌ಟಿಆರ್‌ಐ, ಪರ್ಯಾಯ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೀಟಗಳ ಪತ್ತೆ ಮತ್ತು ನಿಯಂತ್ರಣ ಸಾಧನಗಳನ್ನು ಅಭಿವೃದ್ಧಿಪಡಿಸಲು, ಕೀಟಗಳ ಭಾದೆಯ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕೀಟ ಭಾದೆಯ ನಿಯಂತ್ರಣಕ್ಕಾಗಿ ಫೈಟೊಕೆಮಿಕಲ್(phytochemical) ಮತ್ತು ಸಾರಭೂತ ತೈಲಗಳ ಆಧಾರಿತ ಜೈವಿಕ-ಫ್ಯೂಮಿಗಂಟ್ (fumigant) ಗಳು ಸಹಕರಿಸುತ್ತವೆ. ಕೈಗಾರಿಕಾ ಸೇವೆಗಳಿಗಾಗಿ ಆಹಾರಗಳಲ್ಲಿ, ಕೀಟನಾಶಕ ನಿಯಂತ್ರಣ ಪ್ರಾಧಿಕಾರ / ಕೇಂದ್ರ ಕೀಟನಾಶಕ ಮಂಡಳಿಯು ಆಹಾರ ಸಂರಕ್ಷಕಗಳು ಮತ್ತು ಕೀಟ ನಿಯಂತ್ರಣದ ವಿಭಾಗವನ್ನು ಗುರುತಿಸಿದೆ.

ಆಹಾರ ಸುರಕ್ಷತೆ

ಆಹಾರ ಸುರಕ್ಷತೆಯ ಕ್ಷೇತ್ರದಲ್ಲಿ ಸಂಶೋಧನೆಯು, ಮುಖ್ಯವಾಗಿ ಜೆನೆಟಿಗಾಗಿ ಮಾರ್ಪಡಿಸಿದ ಆಹಾರಗಳು, ಆಹಾರ ರೋಗಕಾರಕಗಳು, ಬಯೋಮಾರ್ಕರ್‌ (biomarker) ಗಳು, ಸಸ್ಯ ಆಧಾರಿತ ವಿಷಕಾರಕಗಳು, ಅಲರ್ಜಿನ್ (allergen) ಗಳು ಮತ್ತು ಪೌಷ್ಠಿಕಾಂಶದ ಲೇಬಲಿಂಗ್ (labelling) ಅನ್ನು ಗುರುತಿಸಲು ಜೀನೋಮಿಕ್ (genomic) ಮತ್ತು ನ್ಯೂಟ್ರಿಯೊಮಿಕ್ (nutriomic) ವಿಧಾನಗಳ ಮೇಲೆ ಕೇಂದ್ರೀಕರಿಸುತ್ತದೆ. ಸಂಶೋಧನೆಯು ಪ್ರೋಟೀನ್ (protein) ರಚನೆ ಮತ್ತು ಆಹಾರ ಅನ್ವಯಿಕೆಗಳು ಮತ್ತು ರೋಗ ಕಾರ್ಯವಿಧಾನಗಳ ಕಡೆಗೆ ಕ್ರಿಯಾತ್ಮಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು, ಸುಧಾರಿತ ಮಲ್ಟಿಸ್ಕೇಲ್ (multi-scale) ಮಾಡೆಲಿಂಗ್(modelling) ಮೇಲೆ ಕೇಂದ್ರೀಕರಿಸುತ್ತದೆ. ಇದಲ್ಲದೆ, ತೈಲಗಳು ಮತ್ತು ಕೊಬ್ಬುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ರಾಸಾಯನಿಕ ಮತ್ತು ಕೈಗಾರಿಕಾ ಮಾಲಿನ್ಯಕಾರಕಗಳ ಗರಿಷ್ಠ ಮಿತಿ ಮತ್ತು ಮುಖ್ಯವಾಗಿ ಆಹಾರ ಸರಪಳಿಯಲ್ಲಿ ಸಂಭವಿಸುವ ಕೀಟನಾಶಕಗಳು ಮತ್ತು ಪ್ರತಿಜೀವಕ ಅವಶೇಷಗಳು ಮತ್ತು ವಿಷಕಾರಿ ಲೋಹಗಳ ಸಹಿಷ್ಣುತೆಯ ಮಟ್ಟವನ್ನು ಒಳಗೊಂಡಂತೆ, ನಿರಂತರ ಸಾವಯವ ಮಾಲಿನ್ಯಕಾರಕಗಳ [ಪಿಒಪಿ (POP)] ಶೇಷ ಮಿತಿಗಳನ್ನು ಅಳೆಯುವ ದೃಢೀಕರಿಸಿದ ಅತ್ಯುನ್ನತ ವಿಶ್ಲೇಷಣಾತ್ಮಕ ಕ್ರಮಗಳನ್ನು[ಎಫ್ ಟಿ - ಐ ಆರ್ (FT-IR), ಎಫ್ ಟಿ - ಏನ್ ಐ ಆರ್ (FT-NIR), ಎಚ್ ಪಿ ಎಲ್ ಸಿ (HPLC), ಜಿ ಸಿ-ಎಂ ಎಸ್ (GC-MS), ಎಲ್ ಸಿ - ಎಂ ಎಸ್/ಎಸ್ (LC-MS/MS), ಐ ಆರ್ ಎಂ ಎಸ್ (IRMS), ಐ ಸಿ ಪಿ (ICP) ಇತ್ಯಾದಿ] ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇದು ಗುಣಮಟ್ಟದ ಭರವಸೆ ಮತ್ತು ಆಹಾರ ಮಾನದಂಡಗಳ ಹೊಸ ನಿಯಮಗಳ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ. ಆಲ್ಕಲಾಯ್ಡ್ (alkaloids)ಗಳು, ಪ್ರೋಟಿಯೇಸ್ (protease) ಪ್ರತಿರೋಧಕಗಳು, ಟ್ಯಾನಿನ್ (tannin)ಗಳು ಮತ್ತು ಫೈಟೇಟ್ (phytate)ಗಳಂತಹ ಪೌಷ್ಠಿಕಾಂಶ-ವಿರೋಧಿ ಅಂಶಗಳ ಬಗ್ಗೆ ಮತ್ತು ಅಗಾರಿಕ್ (agaric) ಆಮ್ಲ, ಹೈಡ್ರೊಸಯಾನಿಕ್ (hydrocyanic) ಆಮ್ಲ, ಅಫ್ಲಾಟಾಕ್ಸಿನ್ (aflatoxin)ಗಳು ಮತ್ತು ಮೈಕೋಟಾಕ್ಸಿನ್(mycotoxin)ಗಳು ಮತ್ತು ಜೈವಿಕ ಮಾಲಿನ್ಯಕಾರಕ (ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಪ್ರಭೇದ) ಗಳಂತಹ ನೈಸರ್ಗಿಕ ವಿಷಕಾರಿ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಆಹಾರ ಉತ್ಪನ್ನಗಳ ಶೆಲ್ಫ್(shelf) ಲೈಫ್ (life) ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ.
ಸುರಕ್ಷಿತ ಮತ್ತು ಆರೋಗ್ಯಕರ ಆಹಾರವನ್ನು ಉತ್ಪಾದಿಸಲು ಮತ್ತು ಎಲ್ಲರಿಗೂ ಆಹಾರ ತಲುಪಿಸಲು ಅಡುಗೆಮನೆಯ ಮೂಲಸೌಕರ್ಯವನ್ನೊಳಗೊಂಡ ಶಕ್ತಿಯ ದಕ್ಷ ಉಪಯೋಗವನ್ನು ಮಾಡಬಲ್ಲ ಚಲಿಸುವ ಸ್ಮಾರ್ಟ್ ಕಾರ್ಟ್ (smart cart) ಅನ್ನು ಬೀದಿ ಬದಿಯ ಆಹಾರ ಮಾರಾಟಗಾರರಿಗಾಗಿ ಸಿಎಫ್‌ಟಿಆರ್‌ಐ ಅಭಿವೃದ್ಧಿಪಡಿಸಿದೆ. ಆಹಾರದ ತ್ವರಿತ ವಿಶ್ಲೇಷಣೆಗಾಗಿ ದೃಢವಾದ ಟೂಲ್ ಕಿಟ್ (tool kit) ಬಳಸಿ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತೊಂದು ಕೊಡುಗೆಯಾಗಿದೆ, ಇದನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಲಾಗುತ್ತಿದೆ.