logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ನಿರ್ದೇಶಕರ ಸಂದೇಶ

ಸಿಎಸ್ಐಆರ್ - ಸಿಎಫ್‌ಟಿಆರ್‌ಐ ನಿಂದ ಶುಭಾಶಯಗಳು!

ದೇಶದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ, ಕಳೆದ ಏಳು ದಶಕಗಳಿಂದ ಪ್ರವರ್ತಕ ಸಂಶೋಧನಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಎಸ್ಐಆರ್ - ಸಿಎಫ್‌ಟಿಆರ್‌ಐ, ತನ್ನ ಗುರಿ, ಕಾರ್ಯತಂತ್ರ ಮತ್ತು ದೃಷ್ಟಿಕೋನಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆಯಲು ಅದರ ಜಾಲತಾಣದ ಮೂಲಕ ನಿಮ್ಮನ್ನು ಸ್ವಾಗತಿಸುತ್ತದೆ.

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು (ಸಿಎಸ್ಐಆರ್ - ಸಿಎಫ್‌ಟಿಆರ್‌ಐ), 1950 ರಲ್ಲಿ ಪ್ರಾರಂಭವಾದಾಗಿನಿಂದ, ಎಂಎಸ್‌ಎಂಇ (MSME) ಗಳು ಸೇರಿದಂತೆ ಅನೇಕ ಭಾರತೀಯ ಆಹಾರ ಕೈಗಾರಿಕೆಗಳಿಗೆ ನವೀನ ಪರಿಹಾರಗಳನ್ನು ಒದಗಿಸುವ ಸಂದರ್ಭದಲ್ಲಿ ಬರುವ ಅನೇಕ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ. ಆಹಾರ ಸಂಸ್ಕರಣೆ, ಆಹಾರ ಸುರಕ್ಷತೆ, ಯಾಂತ್ರೀಕೃತಗೊಂಡ ಸಾಂಪ್ರದಾಯಿಕ ಆಹಾರ ತಯಾರಿಕೆಯಲ್ಲಿ, ಕೃಷಿ-ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ, ಈ ಸಂಸ್ಥೆಯು ಅಪಾರ ಕೊಡುಗೆಗಳನ್ನು ನೀಡುತ್ತಿದೆ. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಜ್ಞಾನವನ್ನು ಸುಸ್ಥಿರ ಉತ್ಪನ್ನಗಳಾಗಿ ಪರಿವರ್ತಿಸುವಾಗ, ನಮ್ಮ ಪ್ರಯತ್ನಗಳು ಸಮಾಜದ ಪ್ರತಿಯೊಂದು ಸ್ತರಗಳಿಗೆ ಕೊಡುಗೆ ನೀಡುವ ವಿವಿಧ ರಾಷ್ಟ್ರೀಯ ಉಪಕ್ರಮಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ.

ಹಲವು ವರ್ಷಗಳಿಂದ ನಾವು ಪೌಷ್ಠಿಕಾಂಶ, ಆರೋಗ್ಯ ಮತ್ತು ಸ್ವಾಸ್ಥ್ಯ, ಆಹಾರ ಸುರಕ್ಷತೆ, ಯಂತ್ರೋಪಕರಣಗಳ ಅಭಿವೃದ್ಧಿ, ಆಹಾರ ಸಂಸ್ಕರಣೆ, ಆಹಾರದ ಪೊಟ್ಟಣ ಕಟ್ಟುವಿಕೆ, ಸಾಂಪ್ರದಾಯಿಕ ಆಹಾರಗಳು ಮತ್ತು ಸುಗ್ಗಿಯ ನಂತರದ ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಗಾಗಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಪ್ರಕ್ರಿಯೆಗಳು, ತಂತ್ರಜ್ಞಾನ, ಉತ್ಪನ್ನಗಳು ಮತ್ತು ಪೀರ್-ರಿವ್ಯೂಡ್ ಜರ್ನಲ್‌ (peer-reviewed journal) ಗಳಲ್ಲಿ ಪ್ರಕಟಣೆಗೊಳ್ಳುವ ವೈಜ್ಞಾನಿಕ ಲೇಖನಗಳ ರೂಪದಲ್ಲಿ ಸಂಸ್ಥೆಗೆ ಲಾಭಾಂಶವನ್ನು ತಂದಿವೆ.

ನಮ್ಮ ಈ ಪಥದಲ್ಲಿ, ರೈತರು, ನವ್ಯಉದ್ಯಮಗಳು, ಸರ್ಕಾರದ ಏಜೆನ್ಸಿಗಳು, ಎಂಎಸ್‌ಎಂಇ (MSME) ಗಳು, ಎಂಎನ್‌ಸಿ (MNC) ಗಳು ಮತ್ತು ವಿದ್ಯಾರ್ಥಿ ಸಮುದಾಯಗಳು ಸೇರಿದಂತೆ ಹೆಚ್ಚಿನ ಪಾಲುದಾರರಿದ್ದಾರೆ. ಈ ಸಂಸ್ಥೆಯು ಆಹಾರ ತಂತ್ರಜ್ಞಾನ ವಿಷಯದಲ್ಲಿ ಪ್ರಧಾನ ಸ್ನಾತಕೋತ್ತರ ಕೋರ್ಸನ್ನು ಹಾಗೂ ವಿವಿಧ ವಿಜ್ಞಾನ ಮತ್ತು ಎಂಜಿನಿಯರಿಂಗ್ (Engineering) ವಿಭಾಗಗಳಲ್ಲಿ ಪಿಎಚ್‌.ಡಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇವುಗಳಲ್ಲದೆ, ಅನೇಕ ತಾಂತ್ರಿಕ ಮತ್ತು ತರಬೇತಿ ಕಾರ್ಯಕ್ರಮಗಳು ಸೇರಿದಂತೆ ಕೌಶಲ್ಯ ಅಭಿವೃದ್ಧಿ ಮತ್ತು ಔಟ್ ರೀಚ್ (outreach) ಕಾರ್ಯಕ್ರಮಗಳನ್ನು ಈ ಸಂಸ್ಥೆಯು ನಡೆಸುತ್ತಿದೆ.

ನಮ್ಮ ಜಾಲತಾಣದ ಮೂಲಕ ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಆರ್&ಡಿ ಕಾರ್ಯಕ್ರಮಗಳು, ಇತ್ತೀಚಿನ ಸಂಶೋಧನಾ ಫಲಿತಾಂಶಗಳು, ಉದ್ಯೋಗಿಗಳು, ಸಹಯೋಗದ ಮಾರ್ಗಗಳು, ಭವಿಷ್ಯದ ಯೋಜನೆಗಳು ಮತ್ತು ಅವಕಾಶಗಳ ಬಗ್ಗೆ ನೀವು ತಿಳಿಯಬಹುದು.

ಶುಭಾಶಯಗಳೊಂದಿಗೆ

(Dr. Sridevi Annapurna Singh)
ನಿರ್ದೇಶಕರು, ಸಿಎಸ್ಐಆರ್ - ಸಿಎಫ್‌ಟಿಆರ್‌ಐ