logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಎಸಿಎಸ್ಐಆರ್@ ಸಿಎಸ್ಐಆರ್ - ಸಿಎಫ್‌ಟಿಆರ್‌

ಸಿಎಸ್ಐಆರ್-ಸಿಎಫ್‌ಟಿಆರ್‌ಐ, ಮೈಸೂರು, ನವದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ (Council of Scientific & Industrial Research) ನ ಪ್ರಮುಖ ರಾಷ್ಟ್ರೀಯ ಸಂಸ್ಥೆ. ಸಿಎಸ್ಐಆರ್-ಸಿಎಫ್‌ಟಿಆರ್‌ಐ ವಿವಿಧ ಹಂತಗಳಲ್ಲಿ ಅಭ್ಯಾಸ ಮತ್ತು ಕಾರ್ಯಗತಗೊಳಿಸಿದ ವಿವಿಧ ಗುಣಮಟ್ಟದ ಗುಣಲಕ್ಷಣಗಳ ಮೂಲಕ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆ, ಜ್ಞಾನ ಪ್ರಸಾರ, ತಂತ್ರಜ್ಞಾನ ವರ್ಗಾವಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಲು ಬದ್ಧವಾಗಿದೆ.

ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿನ ಸಂಶೋಧನೆಗಳಾದ, ಆಹಾರ ಎಂಜಿನಿಯರಿಂಗ್ (Engineering) [ಪ್ರಕ್ರಿಯೆ ಅಭಿವೃದ್ಧಿ ಮತ್ತು ಸಲಕರಣೆಗಳ ವಿನ್ಯಾಸ, ಜೀವರಾಸಾಯನಿಕ ಎಂಜಿನಿಯರಿಂಗ್ (Engineering), ಡೌನ್‌ಸ್ಟ್ರೀಮ್ (Downstream) ಸಂಸ್ಕರಣೆ ಮತ್ತು ಜೈವಿಕ ರಿಯಾಕ್ಟರ್ (reactor) ವಿನ್ಯಾಸ] ಸಂಶೋಧನೆಯು, ಅತ್ಯುತ್ತಮ ಮೂಲ ಸೌಕರ್ಯ, ಸ್ಟೇಟ್-ಆಫ್-ದಿ-ಆರ್ಟ್ (state-of-the-art) ಉಪಕರಣಗಳು ಮತ್ತು ಪೈಲಟ್ ಪ್ಲಾಂಟ್ (pilot plant) ಸೌಲಭ್ಯಗಳು ಹಾಗೂ ಸುಧಾರಿತ ಸಂಶೋಧನಾ ತರಬೇತಿಯಿಂದ ಬೆಂಬಲಿತವಾಗಿದೆ. ಸಿಎಸ್ಐಆರ್-ಸಿಎಫ್‌ಟಿಆರ್‌ಐ, ಮೈಸೂರು, ಅಕಾಡೆಮಿ ಆಫ್ ಸೈಂಟಿಫಿಕ್ & ಇನ್ನೋವೇಟಿವ್ ರಿಸರ್ಚ್ (Academy of Scientific & Innovative Research) (ಎಸಿಎಸ್ಐಆರ್) ಅಡಿಯಲ್ಲಿ ಜೈವಿಕ ವಿಜ್ಞಾನ/ಎಂಜಿನಿಯರಿಂಗ್ (Engineering) ವಿಜ್ಞಾನದಲ್ಲಿ ಪೂರ್ಣ ಸಮಯದ ಡಾಕ್ಟರಲ್ (doctoral) ಸಂಶೋಧನಾ ಕಾರ್ಯಕ್ರಮವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಶೋಧನೆ ಮತ್ತು ನವೀನ ವಾತಾವರಣವನ್ನು ನೀಡುತ್ತದೆ.

ಎಸಿಎಸ್ಐಆರ್(AcSIR) ಅಡಿಯಲ್ಲಿ ಸಿಎಸ್ಐಆರ್-ಸಿಎಫ್‌ಟಿಆರ್‌ಐ ಜನವರಿ/ಆಗಸ್ಟ್ ಅವಧಿಗಾಗಿ ಜೈವಿಕ/ಎಂಜಿನಿಯರಿಂಗ್ (Engineering) ವಿಜ್ಞಾನದಲ್ಲಿ ಪೂರ್ಣ ಸಮಯದ ಡಾಕ್ಟರಲ್ (Doctoral) (ಪಿಎಚ್‌.ಡಿ (Ph.D)) ಸಂಶೋಧನಾ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಈ ಕೆಳಗಿನ ಅರ್ಹತಾ ಅವಶ್ಯಕತೆಗಳೊಂದಿಗೆ ಆಹ್ವಾನಿಸುತ್ತದೆ:

  • Ph.D. (Sciences):
    ಅ. ಜೈವಿಕ ವಿಜ್ಞಾನ: ಜೈವಿಕ, ರಾಸಾಯನಿಕ, ಭೌತಿಕ ಮತ್ತು ಗಣಿತ ವಿಜ್ಞಾನದಲ್ಲಿ ಪಿಎಚ್‌.ಡಿ (Ph.D) ಪದವಿಗೆ ಸಂಶೋಧನೆ ನಡೆಸಲು ವೈಜ್ಞಾನಿಕ ವಿಷಯಗಳಲ್ಲಿ ತೀವ್ರ ಆಸಕ್ತಿ ಇರುವ ಎಂಜಿನಿಯರಿಂಗ್(Engineering) / ತಂತ್ರಜ್ಞಾನ / ಔಷಧದಲ್ಲಿ ಸ್ನಾತಕೋತ್ತರ ಪದವಿ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಮಾನ್ಯವಿರುವ ರಾಷ್ಟ್ರೀಯ ಮಟ್ಟದ ಶಿಷ್ಯವೇತನ (ವಿವಿಧ ಜೆಆರ್‌ಎಫ್/ಎಸ್‌ಆರ್‌ಎಫ್ ಧನಸಹಾಯ ಸಂಸ್ಥೆಗಳಾದ ಸಿಎಸ್‌ಐಆರ್, ಯುಜಿಸಿ, ಡಿಬಿಟಿ, ಡಿಎಸ್‌ಟಿ ಇತ್ಯಾದಿ), ಇನ್‌ಸ್ಪೈರ್ (INSPIRE) ಅಥವಾ ಇತರ ಸಮಾನ ಶಿಷ್ಯವೇತನಗಳನ್ನು ಹೊಂದಿರಬೇಕು.
    ಆ. ಪಿಎಚ್.ಡಿ (Ph.D) (ರಾಸಾಯನಿಕ ವಿಜ್ಞಾನ): ರಸಾಯನಶಾಸ್ತ್ರ ಅಥವಾ ಕೋರ್ (core) ರಾಸಾಯನಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಮಾನ್ಯವಿರುವ ರಾಷ್ಟ್ರೀಯ ಮಟ್ಟದ ಶಿಷ್ಯವೇತನ (ವಿವಿಧ ಜೆಆರ್‌ಎಫ್/ಎಸ್‌ಆರ್‌ಎಫ್ ಧನಸಹಾಯ ಸಂಸ್ಥೆಗಳಾದ ಸಿಎಸ್‌ಐಆರ್, ಯುಜಿಸಿ, ಡಿಬಿಟಿ, ಡಿಎಸ್‌ಟಿ ಇತ್ಯಾದಿ), ಇನ್‌ಸ್ಪೈರ್ (INSPIRE) ಅಥವಾ ಇತರ ಸಮಾನ ಶಿಷ್ಯವೇತನಗಳನ್ನು ಹೊಂದಿರಬೇಕು.

  • • ಪಿಎಚ್‌.ಡಿ.(Ph.D) (ಎಂಜಿನಿಯರಿಂಗ್ (Engineering)): ಉತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ಎಂಜಿನಿಯರಿಂಗ್ (Engineering) / ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ ಮತ್ತು ಅಭ್ಯರ್ಥಿಯು ಮಾನ್ಯವಿರುವ ರಾಷ್ಟ್ರೀಯ ಮಟ್ಟದ ಶಿಷ್ಯವೇತನ (ವಿವಿಧ ಧನಸಹಾಯ ಸಂಸ್ಥೆಗಳಾದ ಜೆಆರ್‌ಎಫ್/ ಎಸ್‌ಆರ್‌ಎಫ್, ಉದಾ. ಸಿಎಸ್‌ಐಆರ್, ಯುಜಿಸಿ, ಡಿಬಿಟಿ ಇತ್ಯಾದಿ) ಹೊಂದಿರಬೇಕು

    ಅಥವಾ

    ಉತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ಮತ್ತು ಮಾನ್ಯವಿರುವ ಗೇಟ್ (GATE) ಅಂಕದೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಮಾನ್ಯವಿರುವ ರಾಷ್ಟ್ರೀಯ ಮಟ್ಟದ ಶಿಷ್ಯವೇತನ (ವಿವಿಧ ಧನಸಹಾಯ ಸಂಸ್ಥೆಗಳಾದ ಜೆಆರ್‌ಎಫ್/ ಎಸ್‌ಆರ್‌ಎಫ್, ಉದಾ. ಸಿಎಸ್‌ಐಆರ್, ಯುಜಿಸಿ, ಡಿಬಿಟಿ ಇತ್ಯಾದಿ) ಇನ್‌ಸ್ಪೈರ್ (INSPIRE) ಅಥವಾ ಇತರ ಸಮಾನ ಶಿಷ್ಯವೇತನಗಳನ್ನು ಹೊಂದಿರಬೇಕು.

  • • ಸಿಎಸ್ಐಆರ್-ಸಿಎಫ್‌ಟಿಆರ್‌ಐ, ಮೈಸೂರಿನಲ್ಲಿ ಪ್ರಾಜೆಕ್ಟ್ (project) ಜೆ ಆರ್ ಎಫ್ (JRF)/ಎಸ್ ಆರ್ ಎಫ್ (SRF): ಕನಿಷ್ಠ 3 ವರ್ಷಗಳ ಕಾಲದ ಪ್ರಾಜೆಕ್ಟ್ (project) ನಲ್ಲಿ ಕೆಲಸ ಮಾಡುತ್ತಿರಬೇಕು ಹಾಗು ಪ್ರಾಜೆಕ್ಟ್ (project) ನ ಅವಧಿಯು ಕನಿಷ್ಠ 2 ವರ್ಷಗಳಿಗಿಂತ ಹೆಚ್ಚು ಉಳಿದಿರಬೇಕು. ಅಂತಹ ಅಭ್ಯರ್ಥಿಯು ಎಂ.ಎಸ್ಸಿ ಯ ಜೊತೆಗೆ ನೆಟ್ (NET) / ಎಂ.ಟೆಕ್ ನೊಂದಿಗೆ ಗೇಟ್(gate) ಅರ್ಹತೆಯನ್ನು ಹೊಂದಿರಬೇಕು. ಸಂಶೋಧನಾ ಪ್ರಬಂಧ ಕಾರ್ಯವು ಪ್ರಸ್ತುತ ಅವರು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ (project) ಗೆ ಅನುಗುಣವಾಗಿರಬೇಕು.

ಅಪ್ಲೈ (apply) ಮಾಡುವುದು ಹೇಗೆ:

ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (online) ನಲ್ಲಿ http://acsir.res.in. ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಮತ್ತು ಪ್ರವೇಶ ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು http://acsir.res.in. ವೆಬ್‌ಸೈಟ್‌ (website) ಗೆ ಭೇಟಿ ನೀಡುವಂತೆ ಕೋರಲಾಗಿದೆ.

ಆಯ್ಕೆ:

ಎಸಿಎಸ್ಐಆರ್(AcSIR) ನ ಜೈವಿಕ/ಎಂಜಿನಿಯರಿಂಗ್ (Engineering) ವಿಜ್ಞಾನದಲ್ಲಿ ಪಿಎಚ್‌.ಡಿ(Ph.D) ಕಾರ್ಯಕ್ರಮದ ಪ್ರವೇಶಕ್ಕೆ ಆಯ್ಕೆಯು, ಮೈಸೂರಿನ ಸಿಎಸ್ಐಆರ್- ಸಿಎಫ್‌ಟಿಆರ್‌ಐ ನಲ್ಲಿ ನಡೆಯಲಿರುವ ಶಾರ್ಟ್(short) ಲಿಸ್ಟ್ (list) ಮಾಡಿದ ಅಭ್ಯರ್ಥಿಗಳ ಆಪ್ಟಿಟ್ಯೂಡ್ ಪರೀಕ್ಷೆಗಳು / ಸಂದರ್ಶನಗಳ ಆಧಾರದ ಮೇಲೆ ಇರುತ್ತದೆ. ಅಭ್ಯರ್ಥಿಗಳು ಸಂದರ್ಶನದ ದಿನಾಂಕಗಳಿಗಾಗಿ ಎಸಿಎಸ್ಐಆರ್ (AcSIR) ವೆಬ್‌ಸೈಟ್‌ (website)ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಮೈಸೂರಿನ ಸಿಎಸ್ಐಆರ್- ಸಿಎಫ್‌ಟಿಆರ್‌ಐ ನಲ್ಲಿನ ಆಪ್ಟಿಟ್ಯೂಡ್ (Aptitude) ಪರೀಕ್ಷೆ / ಸಂದರ್ಶನಗಳಿಗೆ ಹಾಜರಾಗಲು ಶಾರ್ಟ್(short) ಲಿಸ್ಟ್ (list) ಮಾಡಿದ ಅಭ್ಯರ್ಥಿಗಳಿಗೆ ಯಾವುದೇ ಟಿಎ (TA) ಮತ್ತು ಡಿಎ (DA) ಪಾವತಿಸಲಾಗುವುದಿಲ್ಲ. ಇದಲ್ಲದೆ, ಅವರು ವಸತಿ ಮತ್ತು ಆಹಾರಕ್ಕಾಗಿ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.