logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಕೌಶಲ್ಯ ಅಭಿವೃದ್ಧಿ

ರೈತ ಉತ್ಪಾದಕರ ಸಂಘಟನೆಗಳ [ಎಫ್‌ಪಿಒ(FPO)] ಅನುಕೂಲಕ್ಕಾಗಿ, ವಿವಿಧ ರಾಜ್ಯ ಸರ್ಕಾರಗಳ ತೋಟಗಾರಿಕೆ / ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ನಿಯಮಿತವಾಗಿ, ಕಡಿಮೆ ಅವಧಿಯ (2-3 ದಿನಗಳು) ನವೀನ ಮತ್ತು ಸಬಲೀಕರಣ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಿದ್ಧಾಂತ, ಪ್ರಾತ್ಯಕ್ಷಿಕೆ ಮತ್ತು ಹ್ಯಾಂಡ್ಸ್-ಆನ್-ಸೆಷನ್‌ (Hands-on session) ಗಳು ಸೇರಿವೆ.

ಸಿಎಸ್ಐಆರ್-ಸಿಎಫ್‌ಟಿಆರ್‌ಐ ರಾಜ್ಯ ಸರ್ಕಾರಿ ಸಂಸ್ಥೆಗಳ ಸಮನ್ವಯದೊಂದಿಗೆ ಕ್ಲಸ್ಟರ್ (cluster) ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತದೆ. ತಂತ್ರಜ್ಞಾನ ಸಂಸ್ಕರಣೆ, ಕೌಶಲ್ಯ ಅಭಿವೃದ್ಧಿ, ಲಘು ಮಧ್ಯಸ್ಥಿಕೆ ಮತ್ತು ಆಹಾರ ಸಂಸ್ಕರಣೆಯ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಗಳು ಮುಂತಾದ ಸೇವೆಗಳನ್ನು ಒದಗಿಸುತ್ತವೆ.

ಈ ಪೋರ್ಟ್ಫೋಲಿಯೊ (portfolio) ಒಳಗೊಂಡಿರುವ ವಿಶಾಲ ಉದ್ದೇಶಗಳು :

  • ಸಣ್ಣ ಪ್ರಮಾಣದ ಘಟಕಗಳ ಸುಸ್ಥಿರತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು.
  • ತಂತ್ರಜ್ಞಾನ ಸ್ಪರ್ಧಾತ್ಮಕತೆ, ಕೌಶಲ್ಯ ಅಭಿವೃದ್ಧಿ, ನಿಯಂತ್ರಕ ಅಗತ್ಯತೆಗಳು, ಮಾರುಕಟ್ಟೆ ಮತ್ತು ಬಂಡವಾಳ ಮೂಲಸೌಕರ್ಯಗಳ ಬಗ್ಗೆ ತಿಳಿಸಿಕೊಡುವುದು.
  • ಎಸ್ ಎಚ್ ಜಿ (SHG) ಗಳು, ಎಫ್‌ಪಿಒ (FPO)ಗಳು ಮತ್ತು ವ್ಯಾಪಾರ / ರೈತ-ಕೇಂದ್ರಿತ ಸಂಬಂಧಿತ ಸಂಘಗಳ ರಚನೆಗೆ ಬೆಂಬಲ ನೀಡುವುದು.
  • ಮೂಲಸೌಕರ್ಯ ಸೌಲಭ್ಯಗಳನ್ನು ರಚಿಸುವುದು / ನವೀಕರಿಸುವುದು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವುದು.