ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ
 CSIR-CFTRI ಕುರಿತು
 ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು
 ಮಾನವ ಸಂಪನ್ಮೂಲ ಅಭಿವೃದ್ಧಿ
 ಸೇವಾ ಸೌಲಭ್ಯಗಳು 
 ಸಂಪರ್ಕಿಸಿ
ANNUAL REPORT
Home
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ ಕುರಿತು . . .

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (CSIR-CFTRI)ವು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಭಾರತ ಸರ್ಕಾರ ನವದೆಹಲಿ - ಇದರ ವ್ಯಾಪ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಪರಿಷತ್ತಿನ  ಅಡಿಯಲ್ಲಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮುಡುಪಾದ ಬೃಹತ್ ಸಂಸ್ಥೆಗಳಲ್ಲಿ ಒಂದಾಗಿದೆ. 1950 ರಲ್ಲಿ ಆರಂಭಗೊಂಡ ಸಂಸ್ಥೆ ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯ, ಟೋಕಿಯೋದ ಅಂಗಸಂಸ್ಥೆಯಾಗಿ ಮಾನ್ಯತೆಪಡೆದಿದೆ.

ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಅವಶ್ಯಕವಾಗುವಂತಹ ತಂತ್ರಜ್ಞಾನಗಳ ಅಭಿವೃದ್ಧಿ, ಹೊಸ ಕೃಷಿ ಸಂಪನ್ಮೂಲಗಳ ಬಳಕೆ, ಆಹಾರ ಸುಭದ್ರತೆ, ಮೌಲ್ಯವರ್ಧನೆ ಹಾಗೂ ಸುರಕ್ಷಿತವಾದ ಆಹಾರ - ಈ ಅಂಶಗಳಿಗೆ ಒತ್ತು ನೀಡಿ ನವೀನತಮ ಆಹಾರ ಸಂಸ್ಕರಣಾ ತಂತ್ರಜ್ಞಾನಗಳನ್ನು ರೂಪಿಸಿ ಒದಗಿಸುವುದು ಈ ಸಂಸ್ಥೆಯ ಮೂಲೋದ್ದೇಶ.

ಕೃಷಿಕರಿಗೆ, ಬೆಳೆಗಾರರಿಗೆ, ಅದರ ಮೂಲಕವಾಗಿ ಇಡೀ ಸಮುದಾಯ, ಸಮಾಜಕ್ಕೆ ಲಾಭದಾಯಕವಾಗುವಂತಹ ಹತ್ತು ಹಲವು ಸಮಗ್ರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವೆಡೆಗೆ ಸಂಸ್ಥೆಯು ಇತ್ತೀಚಿನದಿನಗಳಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ಗ್ರಾಮೀಣ ಮತ್ತು ನಗರಪ್ರದೇಶದ ವಿಸ್ತೃತ ಮಾರುಕಟ್ಟೆಗಳಲ್ಲಿ ಸಂಸ್ಕರಿತ ಆಹಾರಪದಾರ್ಥಗಳಿಗೆ ಬಹಳ ವೇಗವಾಗಿ ಹೆಚ್ಚುತ್ತಿರುವ ಬೇಡಿಕೆ, ಸಾಂಪ್ರದಾಯಿಕವಾದ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳು, ಮೌಲ್ಯ ವರ್ಧನೆಗೆ ಒದಗುತ್ತಿರುವ ವಿಶೇಷ ಕೃಷಿ ಘಟಕಗಳು, ಹೆಚ್ಚುತ್ತಿರುವ ಬಂಡವಾಳದ ಹರಿವು-ಇವುಗಳಲ್ಲದ ಒಟ್ಟರೆ ಪ್ರಭಾವದಿಂದಾಗಿ ದೇಶದಲ್ಲಿ ಪ್ರಸಕ್ತ ಆಹಾರ ಸಂಸ್ಕರಣಾ ವಲಯವು ನಿಜಕ್ಕೂ ಅಕರ್ಷಕವಾಗಿ, ಚಲನಾತ್ಮಕವಾಗಿ, ಕ್ಷಿಪ್ರ ಚಟುವಟಿಕೆಯ ಕ್ಷೇತ್ರವಾಗಿದೆ. ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾಲಯವು ಒಂದೇಸೂರಿನಡಿ ಆಹಾರ ವಿಷಯಕವಾದ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು ಜಾಗತಿಕ ಆಹಾರ ತಾಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಸಂಸ್ಥೆಯಾಗಿದೆ. ಈ ಸಂಸ್ಥೆಯು ISO 9001:2008, ISO 14001:2004 ಗಳಲ್ಲದೆ ಎನ್ಎಬಿಎಲ್ ನ ಮಾನ್ಯತೆಯನ್ನು ಪಡೆದಿರುವುದು ಹೆಮ್ಮೆಯ ಸಂಗತಿ.

ಸಂಶೋಧನಾ ಕ್ಷೇತ್ರಗಳು:

ಪ್ರಸಕ್ತ, ಸಂಸ್ಥೆಯಲ್ಲಿ ನಡೆಯುತ್ತಿರುವ ಪ್ರಮುಖ ಸಂಶೋಧನಾ ಕಾರ್ಯಕ್ರಮಗಳು ಈ ಕೆಳಕಂಡ ಕ್ಷೇತ್ರಗಳಲ್ಲಿ ಕೇಂದ್ರಿಕೃತವಾಗಿದೆ: ಆಹಾರ ಜೀವ ತಂತ್ರಜ್ಞಾನ, ಪ್ರೋಟೇನ್ ಕೆಮಿಸ್ಟ್ರಿ, ನ್ಯೂಟ್ರಸ್ಸುಟಿಕಲ್ಸ್ ಮತ್ತು ವಿಶಿಷ್ಟ  ಕ್ರಿಯಾತ್ಮಕ ಆಹಾರಗಳು  ಪ್ರಿ ಹಾಗೂ ಪ್ರೊ ಬಯಾಟಿಕ್ಸ್, ಸಾಂಪ್ರದಾಯಿಕ ಆಹಾರಗಳು, ಆಹಾರ ಸುರಕ್ಷಣೆ, ಗುಣಮಟ್ಟ, ವಿಶ್ಲೇಷಣೆ, ಪರೀಕ್ಷಣೆ ಆಹಾರ ಸೂಕ್ಷ್ಮಜೀವಿಶಾಸ್ತ್ರ, ಜ್ವಿವಿಕ ಸಂವೇದಕಗಳು, ಆಹಾರ ಯಂತ್ರಶಿಲ್ಪ, ಆಹಾರ ಕಾಯ್ದೆ / ನಿಬಂಧಕಗಳು, ಧಾನ್ಯ ಸಂಸ್ಕರಣೆ, ಬೇಕ್ ಮಾಡಿದ ಉತ್ಪನ್ನಗಳು, ಮಾಂಸದ ಸಂಸ್ಕರಣೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಆಹಾರದ ಪ್ಯಾಕೇಜಿಂಗ್, ಆಹಾರ ಸಂರಕ್ಷಣೆ, ಅಣ್ಣಿಕ ಪೋಷಣೆ, ಸಸ್ಯ ಹಾಗೂ ಸಾಗರ ಮೂಲದ ಕ್ರಿಯಾತ್ಮಕ ಜೈವಿಕ ಧಾತುಗಳು, ಲಿಷಿಡೊಮಿಕ್ಸ್, ಆಹಾರ ಯೋಜಕಗಳು, ಮಸಾಲೆ ಪದಾರ್ಥಗಳು ಹಾಗೂ ಸ್ವಾದ ತಂತ್ರಜ್ಙಾನ.

ಸಂಸ್ಥೆಯ ಸಂಶೋಧನಾ ಕಾರ್ಯಕ್ರಮಗಳು:

  • ಧಾನ್ಯಾಧಾರಿತ ಉತ್ಪನ್ನಗಳು ಮತ್ತು ಮಿಠಾಯಿಗಳು
  • ಮಾಂಸ, ಮೀನು ಮತ್ತು ಕುಕ್ಕುಟ ತಂತ್ರಜ್ಞಾನ
  • ತಿನ್ನಲು ಸಿದ್ಧವಾದ ಆಹಾರೋತ್ಪನ್ನಗಳು
  • ಸಸ್ಸ ಮೂಲದ ಕ್ರಿಯೂತ್ಮಕ ಜೈವಿಕ ಧಾತುಗಳು
  • ಆಹಾರ ಘಟಕಾಂಶಗಳು, ಯೋಜಕಗಳು ಮತ್ತು ಸ್ವಾದಗಳು
  • ಸಾಂಪ್ರದಾಯಿಕ ಆಹಾರ ಸಂಸ್ಕರಣೆಯ ಸ್ವಯಂಚಾಲಿತ ವ್ಸವಸ್ಥೆಗಳು
  • ಅಣು ಹಾಗೂ ವಂಶವಾಹಿ ಮಟ್ಟದ ಸಂರಚನೆಯಲ್ಲಿ ಕಾರ್ಯಕೈಗೊಂಡು ಬಹುಕಾಲ ಹಣ್ಣುಗಳ ಸಂರಕ್ಷಣೆ ಮಾಡುವುದು
  • ಧಾನ್ಯಗಳು, ಮಸಾಲೆ ಪದಾರ್ಥಗಳು ಹಾಗೂ ಮೂಲಿಕೆಗಳ ಕೊಯ್ಞೋತ್ತರ ನಷ್ಟವನ್ನು ತಗ್ಗಿಸುವುದು
  • ಅಕ್ಕಿ, ಗೋಧಿ, ತರಕಲು ಧಾನ್ಯಗಳು, ಸಿರಿಧಾನ್ಯಗಳು, ದ್ವಿದಳಧಾನ್ಯಗಳು ಹಾಗೂ ಸಾಗರೀಯ ಕಳೆಗಳ ಮೌಲ್ಯವರ್ಧನೆ
  • ಪರಿಸರ ಸ್ನೇಹಿ ತಂತ್ರಜ್ಞಾನಗಳು
  • ಕಿಣ್ವ ಹಾಗೂ ಸೂಕ್ಷ್ಮಜೀವಿ ತಂತ್ರಜ್ಞಾನಗಳು
  • ಆಹಾರ ಸುರಕ್ಷಣೆ ಹಾಗೂ ಗುಣಮಟ್ಟ ವಿಶ್ಲೇಷಣೆಯ ವಿಧಾನಗಳು
  • ಜೈವಿಕ ಎಂಜಿನಿಯರಿಂಗ್ ಮತ್ತು ಜೈವಿಕ ಸಂವೇದಕಗಳು
  • ಆಹಾರ ಸಂರಕ್ಷಕಗಳು, ಶೇಖರಣೆ ಮತ್ತು ಪ್ಯಾಕೇಜಿಂಗ್
  • ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ
  • ತಂತ್ರಜ್ಞಾನ ವರ್ಗಾವಣೆ ಮತ್ತು ಉದ್ಯಮಶೀಲತಾ ಅಭಿವೃದ್ಧಿ