ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ
 CSIR-CFTRI ಕುರಿತು
 ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು
 ಮಾನವ ಸಂಪನ್ಮೂಲ ಅಭಿವೃದ್ಧಿ
 ಸೇವಾ ಸೌಲಭ್ಯಗಳು 
 ಸಂಪರ್ಕಿಸಿ
ANNUAL REPORT
Home
ಮಾನವ ಸಂಪನ್ಮೂಲ ಅಭಿವೃದ್ಧಿ

 

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (CSIR-CFTRI)ವು 1965 ರಿಂದಲೂ  ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಆಹಾರ ತಂತ್ರಜ್ಞಾನ ವಿಷಯಕವಾದ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ನಡೆಸಿಕೊಂಡು ಬರುತ್ತಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಆಹಾರೋದ್ಯಮ ಬೆಳೆಯಲು ಈ ಕಾರ್ಯಕ್ರಮ ನೀಡಿರುವ ಕೊಡುಗೆ ಅನನ್ಯ. ಏಕೆಂದರೆ, ಈ ಉದ್ದಿಮೆಗಳ ಮೂಂಚೂಣಿಯಲ್ಲಿ ನಿಂತು, ಅವುಗಳ ಕಾರ್ಯಭಾರವನ್ನು ನಿರ್ವಹಿಸುತ್ತಿರುವವರಲ್ಲಿ ಅತಿಹೆಚ್ಚಿನವರು ಮೂಲತರಬೇತಿ, ಪರಿಣತಿ ಪಡೆದಿರುವುದು ಇಲ್ಲಿಯೇ, ಗೋಧಿ ಮಿಲ್ ಮಾಡುವ ಉದ್ದಿಮೆಯ ಉಪಯೋಗಕ್ಕಾಗಿ ಸಂಸ್ಥೆಯು 'ಗಿರಣಿ ತಂತ್ರಜ್ಞಾನ' ಕುರಿತಂತೆ ಹತ್ತು ತಿಂಗಳ ಅವಧಿಯ  ಸರ್ಟಿಫಿಕೇಟ್ ಕೋರ್ಸ್ ಅನ್ನು ನಡೆಸುತ್ತಿದೆ.  ಪಿ.ಎಚ್.ಡಿ ಹಾಗೂ ಪಿ.ಎಚ್.ಡಿ ನಂತರ, ಜೀವವಿಜ್ಞಾನ ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅನ್ವೇಷಣೆ ನಡೆಸುವ ಒಂದು ದೊಡ್ಡ ಸಂಶೋಧಕ ವರ್ಗವೇ ಇಲ್ಲಿದ್ದು, ಕೇಂದ್ರೀಯ ತಾಂತ್ರಿಕ ಸಂಶೋಧನಾಲಯವನ್ನು ಒಂದು ಉತ್ಕ್ರೃಷ್ಟ ವಿದ್ವತ್ ಕೇಂದ್ರ ಎಂದು ಗುರುತಿಸಲಾಗುತ್ತದೆ. ವೈಜ್ಞಾನಿಕ ಮತ್ತು ನವಸಂಶೋಧನಾ ಅಕಾಡೆಮಿ (Academy of Scientific & Innovative Research - AcSIR)ಯ ಸ್ಥಾಪನೆಯಿಂದಾಗಿ ಸಂಶೋಧನೆಗೆ,  ಆಳವಾದ ಅಧ್ಯಯನಕ್ಕೆ ಇನ್ನೂ ಹೆಚ್ಚಿನ ಒತ್ತು ಸಿಕ್ಕಂತಾಗಿದೆ. ಕೈಗಾರಿಕೆಗಳಲ್ಲಿ, ಸಂಶೋಧನೆಯಲ್ಲಿ, ಸರ್ಕಾರಿ ನೌಕರಿಯಲ್ಲಿ ತೊಡಗಿಕೊಂಡಿರುವ ವರ್ಗಕ್ಕೆ ನಮ್ಮಲ್ಲಿ ವರ್ಷದುದ್ದಕ್ಕೂ ನಡೆಯುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು ವರದಾನದಂತಿವೆ. ವಿಶ್ವಸಂಸ್ಧೆಯ ವಿಶ್ವವಿದ್ಯಾನಿಲಯದ ವತಿಯಿಂದ ಹಲವಾರು ವರ್ಷಗಳಿಂದಲೂ ನಡೆಯುತ್ತಿರುವ ಅನೇಕ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಸಾರ್ಕ್, ಆಸಿಯಾನ್ ಒಕ್ಕೂಟ ಹಾಗೂ ಆಫ್ರಿಕಾದ ರಾಷ್ಟ್ರಗಳ ಹಲವಾರು ವೃತ್ತಿಪರರು ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಉನ್ನತೀಕರಿಸಿಕೊಂಡಿದ್ದಾರೆ.